Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಗ್ರೀನ್ ಚಿಕನ್ ಕರಿ ಮಾಡಿ ತಿನ್ನಿ ರುಚಿ ಅದ್ಭುತ

ಬೇಕಾಗುವ ಪದಾರ್ಥಗಳು…

ಎಣ್ಣೆ- 3 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಚಿಕನ್ – ಅರ್ಧ ಕೆಜಿ
ಉಪ್ಪು-ರುಚಿಗೆ ತಕ್ಕಷ್ಟು
ಅರಿಶಿಣದ ಪುಡಿ- ಸ್ವಲ್ಪ
ಮೊಸರು- 1/4 ಬಟ್ಟಲು
ಗೋಡಂಬಿ- 8
ಈರುಳ್ಳಿ- ಎಣ್ಣೆಯಲ್ಲಿ ಫ್ರೈ ಮಾಡಿದ್ದು ಸ್ವಲ್ಪ
ಹಸಿಮೆಣಸಿನ ಕಾಯಿ- 2
ಕೊತ್ತಂಬರಿ ಸೊಪ್ಪು- ಒಂದು ಹಿಡಿಯಷ್ಟು
ಪುದೀನಾ- ಒಂದು ಹಿಡಿಯಷ್ಟು
ಕಾಳು ಮೆಣಸಿನ ಪುಡಿ- ಅರ್ಧ ಚಮಚ
ಚಕ್ಕೆ-ಲವಂಗ ಪುಡಿ- ಸ್ವಲ್ಪ
ದನಿಯಾ ಪುಡಿ- ಸ್ವಲ್ಪ
ಗರಂ ಮಸಾಲಾ ಪುಡಿ- ಕಾಲು ಚಮಚ
ಮಾಡುವ ವಿಧಾನ…

ಮೊದಲಿಗೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಮಾಡಿಕೊಳ್ಳಿ.
ನಂತರ ಚಿಕನ್ ಪೀಸ್ ಗಳನ್ನು ಹಾಕಿ. ನಂತರ ರುಚಿಗೆತಕ್ಕಷ್ಟು ಉಪ್ಪು, ಅರಿಶಿಣದ ಪುಡಿಸ ಮೊಸರು ಹಾಕಿ 3 ನಿಮಿಷ ಬೇಯಿಸಿ.
ಬಳಿಕ ಮಿಕ್ಸಿ ಜಾರ್ ಗೆ ಗೋಡಂಬಿ, ಈರುಳ್ಳಿ, ಹಸಿಮೆಣಸಿನ ಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಬೇಯಿಸಿದ ಚಿಕನ್ ಗೆ ಹಾಕಿ. 2 ನಿಮಿಷ ಕುಡಿಯಲು ಬಿಡಿ.
ನಂತರ ಕಾಳುಮೆಣಸಿನ ಪುಡಿ, ಚಕ್ಕೆ-ಲವಂಗ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಿ, ಮಸಾಲೆ ಗಟ್ಟಿಗಾದ ಬಳಿಕ ಒಲೆಯಿಂದ ಇಳಿಸಿ ಕೊತ್ತಂಬರಿ ಸೊಪ್ಪನೊಂದಿಗ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಚಿಕನ್ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button