Homeಜನಮನಪ್ರಮುಖ ಸುದ್ದಿ

ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡುವ ವಿಧಾನದ ಸಂಪೂರ್ಣ ಮಾಹಿತಿ

ಗೃಹಜ್ಯೋತಿ(Gruha jyothi) ಯೋಜನೆಯಡಿ ಸೌಲಭ್ಯ ಪಡೆಯಲು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮನೆ ಬದಲಾವಣೆ ಮಾಡಿಕೊಂಡ ಬಲಿಕವು ಹೊಸ ಮನೆಯ ಆರ್ ಆರ್ ಸಂಖ್ಯೆಯನ್ನು ಸೇರ್ಪಡೆ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ.

ಇದರಂತೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಹಳೆಯ ಆರ್.ಆರ್ ಸಂಖ್ಯೆಗೆ ಲಿಂಕ್ ಅಗಿರುವ ಆಧಾರ್ ನಂಬರ್ ಅನ್ನು ಡಿ-ಲಿಂಕ್ ಮಾಡಬೇಕು ಇದನ್ನು ಹೇಗೆ ಮಾಡುವುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು/ಡಿ-ಲಿಂಕ್ ಮಾಡಲು ವೆಬ್ಸೈಟ್ ಲಿಂಕ್ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು ಒಂದು ವರ್ಷವಾಗಿದ್ದು. ಇದೇ ಸಮಯದಲ್ಲಿ ಇಂಧನ ಇಲಾಖೆಯು ಗೃಹಜ್ಯೋತಿ ಗ್ರಾಹಕರಿಗಾಗಿ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಅನ್ಲೈನ್ ಮೂಲಕ ಅರ್ಜಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ಹಳೆ ಮನೆಯ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡಿ, ಹೊಸ ಮನೆಯ ಸಂಖ್ಯೆಯನ್ನು ಲಿಂಕ್‌ ಮಾಡುವ ಮೂಲಕ ಗೃಹಜ್ಯೋತಿ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗು ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅವಕಾಶವಿದ್ದು, ಗ್ರಾಹಕರು ಮನೆ ಬದಲಾವಣೆ ಮಾಡಿಕೊಂಡ ಬಳಿಕ ಉಚಿತ ವಿದ್ಯುತ್ ವ್ಯವಸ್ಥೆ ಸ್ಥಗಿತವಾಗುವುದನ್ನು ತಡೆಯಲು ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಿ ಹಳೆ ಮನೆಯ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡಿ ಹೊಸ ಮನೆಯ ಆರ್‌ಆರ್‌ ಸಂಖ್ಯೆಯನ್ನು ಲಿಂಕ್‌ ಮಾಡಿದರೆ ಹೊಸ ಮನೆಯ ವಿದ್ಯುತ್ ಉಚಿತವಾಗುತ್ತದೆ.

ruha jyothi D-link- ಸೇವಾ ಸಿಂಧು ಪೋರ್ಟಲ್‌ ಭೇಟಿ ಮಾಡಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡುವ ವಿಧಾನ:

ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಯಾವ ಕ್ರಮ ಅನುಸರಿಸಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಅನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಬೇಕು ಎನ್ನುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

Step-1: ಮೊದಲಿಗೆ ಈ Gruha jyothi D-link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ ಗೃಹಜ್ಯೋತಿ ಯೋಜನೆಯ ಡಿ-ಲಿಂಕ್ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “ಆಧಾರ್ ಸಂಖ್ಯೆಯನ್ನು ನಮೂದಿಸಿ (ಗೃಹ ಜ್ಯೋತಿಯೊಂದಿಗೆ ನೋಂದಾಯಿತ ಆಧಾರ್) / Enter Aadhaar Number (Registered Aadhaar with Gruha Jyothi)” ಈ ರೀತಿ ತೋರಿಸುವ ಕಾಲಂ ನಲ್ಲಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ “Get details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Gruha jyothi D-link- ಸೇವಾ ಸಿಂಧು ಪೋರ್ಟಲ್‌ ಭೇಟಿ ಮಾಡಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡುವ ವಿಧಾನ:

ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಯಾವ ಕ್ರಮ ಅನುಸರಿಸಿ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಅನ್ನು ನಿಮ್ಮ ಮೊಬೈಲ್ ನಲ್ಲಿ ಮಾಡಬೇಕು ಎನ್ನುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

Step-1: ಮೊದಲಿಗೆ ಈ Gruha jyothi D-link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ ಗೃಹಜ್ಯೋತಿ ಯೋಜನೆಯ ಡಿ-ಲಿಂಕ್ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “ಆಧಾರ್ ಸಂಖ್ಯೆಯನ್ನು ನಮೂದಿಸಿ (ಗೃಹ ಜ್ಯೋತಿಯೊಂದಿಗೆ ನೋಂದಾಯಿತ ಆಧಾರ್) / Enter Aadhaar Number (Registered Aadhaar with Gruha Jyothi)” ಈ ರೀತಿ ತೋರಿಸುವ ಕಾಲಂ ನಲ್ಲಿ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಹಾಕಿ “Get details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಗೃಹಜ್ಯೋತಿ ಡಿ-ಲಿಂಕ್: click here

Related Articles

Leave a Reply

Your email address will not be published. Required fields are marked *

Back to top button