ಸಂತೋಷಜೀ ವಿರುದ್ಧ ಅಪಪ್ರಚಾರ ಕಾನೂನು ಕ್ರಮಕ್ಕೆ ಗುರು ಕಾಮಾ ಆಗ್ರಹ
ಸಿಟಿ ರವಿ ಅವರ ವಿರುದ್ಧ ಇದೇ ಷಡ್ಯಂತರ - ಆರೋಪಿಗಳು
ಸಂತೋಷಜೀ ವಿರುದ್ಧ ಷಡ್ಯಂತ್ರ ಕಾನೂನು ಕ್ರಮಕ್ಕೆ ಆಗ್ರಹ
ಯಾದಗಿರಿಃ ಸಂತೋಷಜೀ ಅವರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಲಿಂಗಾಯತರ ಅಗತ್ಯವಿಲ್ಲ ನಮಗೆ ಹಿಂದೂತ್ವದ ಮೇಲೆ ನಾವು ಮುಂದುವರೆಯುತ್ತೇವೆ ಎಂದು ಸಂತೋಷಜೀ ಹೇಳಿಕೆ ನೀಡಿದ್ದಾರೆಂಬ ಸುಳ್ಳು ಸುದ್ದಿ ಎಲ್ಲಡೆ ವೈರಲ್ ಮಾಡಿರುವದು ಸರಿಯಲ್ಲ ಎಂದು ಬಿಜೆಪಿ ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಸೋಲುವ ಭೀತಿಯಿಂದ ಹೀಗೆಲ್ಲ ಅಪ ಪ್ರಚಾರ ಮಾಡುತ್ತಿರುವುದು ಅತಿರೇಕದ ಪರಮಾವಧಿ, ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಹೇಗಾದರೂ ಮಾಡಿ ಸಂತೋಷಜೀ ಎಂಬ ಅಪ್ರತಿಮ ದೇಶಭಕ್ತ, ರಾಜಕೀಯ ನೀತಿ ತಜ್ಞ ಇವರನ್ನು ಕಟ್ಟಿ ಹಾಕಬೇಕೆಂಬ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ವ್ಯಕ್ತಿತ್ವಕ್ಕೆ ಮತ್ತು ಅವರ ವರ್ಚಸ್ಸಿಗೆ ದಕ್ಕೆ ತರಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
ಸಂತೋಷಜೀ ಅವರು ವೀರಶೈವ ಸಮುದಾಯದವರ ವಿರುದ್ಧ ಮಾತನಾಡಿದ ಯಾವೊಂದು ದಾಖಲೆ, ಪುರಾವೆಗಳ ಇಲ್ಲ. ಆದರೆ ಇದನ್ನು ಕಪೋಲಕಲ್ಪಿತ ಹೇಳಿಕೆಗಳನ್ನು ಸೃಷ್ಟಿಸಿ ಅದನ್ನು ಪತ್ರಿಕೆ ರೂಪದಲ್ಲಿ ಹೇಳಿಕೆಯಂತೆ ಬಿತ್ರರಿಸುವ ಮೂಲಕ ಅಪ ಪ್ರಚಾರ ನಡೆಸುತ್ತಿರುವದು ಮಹಾ ಅಪರಾಧವಾಗಿದೆ.
ಇಂಥ ಹೇಳಿಕೆಗಳನ್ನು ಸೃಷ್ಟಿಸಿ ಭಾರತೀಯ ಜನತಾ ಪಕ್ಷದ ಪರ ಇರುವ ವೀರಶೈವ ಸಮಾಜವನ್ನು ಒಡೆದು ಹಾಳಬೇಕೆಂಬ ದುರ್ಬುದ್ಧಿಯಿಂದ ಹೀನ ಕೃತ್ಯಕ್ಕೆ ಕೈ ಹಾಕಿರುವದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವೀರಶೈವ ಸಮಾಜದ ಬಾಂಧವರು ಅತ್ಯಂತ ಬುದ್ಧಿವಂತರು ಇಂಥ ಬಾಲಿಶ ಹೇಳಿಕೆಗಳನ್ನು ಬಹಳ ನೋಡಿದ್ದಾರೆ. ಸಂತೋಷಜೀ ಅವರ ರಾಜಕೀಯದಲ್ಲಿ ಕೇವಲ ದೇಶಪ್ರೇಮ ಮತ್ತು ದೇಶದ ಅಭಿವೃದ್ಧಿಯ ತುಡಿತ ಮಾತ್ರ ಕಾಣುತ್ತದೆ ಅವರ ವ್ಯಕ್ತಿತ್ವದಲ್ಲಿ ಜಾತಿ ಮತ್ತು ಸಮುದಾಯದ ವಿಚಾರಗಳು ಎಂದಿಗೀ ಇರುವದಿಲ್ಲ.
ಅವರ ವಿಚಾರಧಾರೆಗಳು ಕೇವಲ ದೇಶದ ಪ್ರಗತಿ ಮತ್ತು ದೇಶಕ್ಕಾಗಿ ಮಾತ್ರ ಸೀಮಿತ, ಸುತ್ತೂರು ಮಠ, ಹಾಗೂ ಸಿದ್ದಗಂಗಾ ಮಠ, ಸಿದ್ದೇಶ್ವರ ಶ್ರೀಗಳ ಪರಮ ಅನುಯಾಯಿಗಳು ಇಂಥ ಒಬ್ಬ ನಾಯಕನಿಗೆ ಜಾತಿಯ ವಿಚಾರದಲ್ಲಿ ಹೆಣೆಯಲು ನಿಂತಿರುವ ವಿರೋಧ ಪಕ್ಷದವರಿಗೆ ನಾಚಿಕೆಯಾಗಬೇಕು.
ಇಂಥ ನೀಚ ರಾಜಕೀಯ ಸಂಸ್ಕೃತಿ ಬಿಡಬೇಕು ಮತ್ತು ಇಂಥ ತಲೆ ಬುಡ ಇಲ್ಲದ ಕಪೋಲ ಕಲ್ಪಿತ ಹೇಳಿಕೆಗಳನ್ನು ಸೃಷ್ಟಿಸುವುದು ನಿಲ್ಲಿಸಬೇಕು ಇಲ್ಲವಾದಲ್ಲಿ ತಕ್ಕ ಪಾಠ ಕಲಿಸಬೇಕಾದೀತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಸಮುದಾಯದವರು ಇಂತಹ ಸುಳ್ಳು ಸುದ್ದಿ ಸೃಷ್ಟಿಸಿದ ಅವರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ.ಇದೇ ಸಂಸ್ಕೃತಿ ಮುಂದುವರೆದರೆ ಸಮಾಜದವರೆಲ್ಲ ಒಟ್ಟಾಗಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ.
ಈ ಹಿಂದೆ ಲಿಂಗಾಯತ ಧರ್ಮ ಮಾಡಿ ಸಮಾಜವನ್ನು ಇಬ್ಭಾಗ ಮಾಡಲು ಹೋಗಿ ಅಧಿಕಾರ ಕಳೆದುಕೊಂಡರು ಬುದ್ದಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ವೀರಶೈವ ಸಮಾಜ ನಾಳೆ ಇನ್ನೊಂದು ಜಾತಿಯನ್ನು ಸಹ ಹೀಗೆ ಒಡೆದು ಆಳುವ ಕೆಲಸ ಈ ಕುತಂತ್ರಗಳು ಮಾಡುತ್ತಾರೆ ಈ ಜಾತಿ ರಾಜಕಾರಣ ಭಯೋತ್ಪಾದನೆಗೆ ಸಮ ಅಂದರೆ ತಪ್ಪಾಗಲಿಕಿಲ್ಲ.
ಇಂಥ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಪ್ರಚಾರ ಮಾಡುತ್ತಿರುವವರನ್ನು ಅತ್ಯಂತ ಕಠೋರವಾಗಿ ಖಂಡಿಸುತ್ತಾ ಈ ಸುಳ್ಳು ಸುದ್ದಿಗಳ ಮೂಲಗಳನ್ನು ಕಂಡು ಹಿಡಿದು ಅಂತ ಪೊಲೀಸರು ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಹಾಗೆ ವೀರಶೈವ ಸಮಾಜದ ಬಾಂಧವರು ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು. ಇಂತಹ ಸುಳ್ಳು ಸುದ್ದಿ ನೋಡಿದಾಗ ತಕ್ಷಣಕ್ಕೆ ಉದ್ವೇಗಕ್ಕೆ ಒಳಗಾಗಬಾರದು.
ಈ ಹಿಂದೆ ಸಿಟಿ ರವಿ ಸರ್ ಅವರು ವೀರಶೈವ ಸಮಾಜದ ವಿರುದ್ಧ ಮಾತಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿತ್ತು. ಪ್ರಸ್ತುತ ಆ ಕಿರಾತಕರು ಶಿಕ್ಷೆ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಅದೇ ರೀತಿ ಈಗ ಸಂತೋಷಜೀ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.