ಪ್ರಮುಖ ಸುದ್ದಿ
ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ದಯಾನಂದ ಅಗಸರ ನೇಮಕ
ಗುಲ್ಬರ್ಗಾ ವಿವಿ ಕುಲಪತಿಯಾಗಿ ಪ್ರೊ.ದಯಾನಂದ ಅಗಸರ ನೇಮಕ
ಕಲ್ಬುರ್ಗಿಃ ಕಳೆದ ಒಂದುವರೆ ವರ್ಷದಿಂದ ಖಾಲಿ ಇರುವ ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ವಿವಿಯ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ದಯಾನಂದ ಅಗಸರ ನೇಮಕವಾಗಿದ್ದಾರೆ.
ವಿವಿಯ ಕುಲಾಧಿಪತಿಯಾದ ರಾಜ್ಯಪಾಲರು ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ವಿವಿಯ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಪ್ರೊ.ದಯಾನಂದ ಅಗಸರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಕುಲಪತಿ ಪ್ರೊ.ಅಗಸರ ಅವರು ಇದೇ ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿ ಗ್ರಾಮದವರಾಗಿದ್ದು, ಈ ಹಿಂದೆ ಇದೆ ವಿವಿಯ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದರು. ತೀರ ಹಿಂದುಳಿದ ಸಮಾಜದಲ್ಲಿ ಇಂತಹ ಉನ್ನತ ಹುದ್ದೆ ಅಲಂಕರಿಸಿರುವದು ಮಡಿವಾಳ ಸಮಾಜ ಬಂಧುಗಳಲ್ಲಿ ಹರ್ಷ ವ್ಯಕ್ತವಾಗಿದೆ.
ಪ್ರೊ. ಅಗಸರ ಅವರು ಸರಳ ಸಜ್ಜನಿಕೆಯ ಸಮಾನತೆ ಭಾವನೆಯ ವ್ಯಕ್ತಿತ್ವ ಹೊಂದಿದ್ದು ಶರಣ ಪರಂಪರೆಯಲ್ಲಿ ಬೆಳೆದು ಬಂದವರಾಗಿದ್ದಾರೆ. ತಮ್ಮ ಕರ್ತವ್ಯವನ್ನು ನಿಷ್ಠೆ ಯಿಂದ ನಿಭಾಯಿಸುವವರಾಗಿದ್ದಾರೆ.