ಮಕ್ಕಳಿಗೆ ಸ್ವಚ್ಛ ಭಾರತ ಪಾಠ ಮಾಡಿದ ಮಾಜಿ ಶಾಸಕ ಶಿರವಾಳ
ಗಾಂಧಿ ಸಪ್ತಾಹ ಅಂಗವಾಗಿ ಶಾಲೆಗೆ ಭೇಟಿ
ಯಾದಗಿರಿ,ಶಹಾಪುರಃ ಗಾಂಧಿ ಸಪ್ತಾಹ ಅಂಗವಾಗಿ ನಗರದ ಹಳಿಪೇಟೆಯ ಜ್ಞಾನ ಗಂಗೋತ್ರಿ ಶಾಲೆಗೇ ಭೇಟಿ ನೀಡಿದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಶಾಲಾ ಮಕ್ಕಳೊಂದಿಗೆ ಗಾಂಧೀಜಿಯವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರು ಪಾಟೀಲ್, ಬಾಲ್ಯದಿಂದಲೇ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಹಂತ ಹಂತವಾಗಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವಾಗಲಿದೆ. ಅದಕ್ಕೆ ಪೂರಕ ಸಹಕಾರ ನಾವೆಲ್ಲ ನೀಡಬೇಕಿದೆ. ಪ್ಲಾಸ್ಟಿಕ್ ಬಳಕೆಯಿಂದÀ ಮಾರಕ ರೋಗಗಳು ಹರಡುವದಲ್ಲದೆ ಪ್ರಕೃತಿ ಹಾಳಾಗುತ್ತಿದೆ.
ಈ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ. ಅಲ್ಲದೆ ಮಕ್ಕಳು ಅನುಸರಿಸುವದಲ್ಲದೆ ಮನೆಯಲ್ಲಿ ಪಾಲಕರಿಗೂ ತಿಳಿಸುವಂತ ಕೆಲಸವಾಗಬೇಕು. ಶಾಲಾ ಶಿಕ್ಷಕರು ಈ ಕುರಿತು ನಿತ್ಯ ಮಕ್ಕಳಿಗೆ ಬೋಧನೆ ಮಾಡಬೇಕು. ಆಗ ಗಾಂಧಿ ಸಪ್ತಾಹ ಅವರು ಕಂಡ ಕನಸು ಮತ್ತು ಪ್ರಧಾನಿ ಮೋದಿಯವರ ಕನಸಿನ ಸ್ವಚ್ಛ ಭಾರತ ನಿರ್ಮಾಣ ಯಶಸ್ಸು ಕಾಣಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ನಗರಸಭೆ ಸದಸ್ಯ ಲಾಲಹ್ಮದ ಖುರೇಶಿ, ಮುಖಂಡರಾದ ಮರೆಪ್ಪ ಹಯ್ಯಾಳಕರ್, ಗುರುಕಾಮಾ, ಅನಂತರಾವ ದೇಶಪಾಂಡೆ, ಶ್ರೀಕಾಂತ ಸುಬೇದಾರ ಇತರರಿದ್ದರು.