ಶಿಕ್ಷಣದಿಂದ ಕಾರ್ಮಿಕರ ಕಲ್ಯಾಣ- ರಾಜ್ಯಾಧ್ಯಕ್ಷ ದೇವರಾಜ
ಶಿಕ್ಷಣದಿಂದ ಕಾರ್ಮಿಕರ ಕಲ್ಯಾಣ- ರಾಜ್ಯಾಧ್ಯಕ್ಷ ದೇವರಾಜ
ಶಹಾಪುರಃ ಬದುಕಿನ ಬವಣೆಯನ್ನು ನೀಗಿಸಲು ಹಗಲಿರುಳು ಶ್ರಮಿಸುತ್ತಿರುವ, ಶ್ರಮಿಕ ಜೀವಿಗಳಾದ ಕಟ್ಟಡ ಕಾರ್ಮಿಕರು ಮಕ್ಕಳು, ಸುಶಿಕ್ಷಿತ ಶಿಕ್ಷಣ ನೀಡಿದಾಗ ಕಾರ್ಮಿಕ ವರ್ಗದ ಕಲ್ಯಾಣ ಸಾಧ್ಯವಾಗುತ್ತದೆ ಎಂದು ರಾಜ್ಯ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಡಿ.ದೇರಾಜರ ಕರೆ ನೀಡಿದರು.
ನಗರದ ಮಹಾತ್ಮ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಆವರಣದಲ್ಲಿ ನಡೆದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕಾರ್ಮಿಕರ ಜಾಗೃತಿ ಅವಶ್ಯಕವಾಗಿದ್ದು, ಸಂಘಟನೆಗಳು ಪ್ರತಿ ಹಳ್ಳಿಗಳಲ್ಲಿ ಕಟ್ಟಡ ಕಾರ್ಮಿಕರನ್ನು ಸಂಪರ್ಕಿಸಿ ಸರ್ಕಾರದ ಯೋಜನೆಗಳ ಪರಿಜ್ಞಾನ ನೀಡಬೇಕು. ಪ್ರತಿಯೊಂದು ಗಲ್ಲಿಗಳಲ್ಲಿನ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸಿದ್ದಲ್ಲಿ ಸರ್ಕಾರದ ಯೋಜನೆಗಳ ಲಾಭ ಪಡೆಯಬಹುದು.
ಈಗಾಗಲೇ ಬೆಂಗಳೂರಿನಲ್ಲಿ 40 ಲಕ್ಷ, ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ. 8500 ಕೋಟಿ ಹಣ, ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿದ್ದು, ಅದನ್ನು ಕಾರ್ಮಿಕರು ಸದ್ಭಳಿಕೆ ಮಾಡಿಕೊಳ್ಳಬೇಕು ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶರಣು ಗದ್ದುಗೆಯವರು ಮತನಾಡಿ, ಭೂಮಿಯಲ್ಲಿ ಬೆವರು ಸುರಿಸುತ್ತಾ ದೇಶ ಮತ್ತು ನಾಡಿನ ಸಮೃದ್ಧಿಗೆ ಶ್ರಮಿಸುವ ವರ್ಗ ಕಾರ್ಮಿಕ ವರ್ಗ. ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹತ್ತಾರು ಯೋಜನೆಗಳನ್ನು ರೂಪಿಸಿದ ಅವುಗಳನ್ನು ಸಮರ್ಪಕವಾಗಿ ಅರ್ಹ ಕಾರ್ಮಿಕರಿಗೆ ತಲುಪಿಸಿದಲ್ಲಿ ಅವರ ಬದುಕಿಗೆ ಸಹಕಾರವಾಗಲಿದೆ.
ಕಾರ್ಮಿಕರು ದೇಶದ ಮೂಲ ಶ್ರಮಿಕರು. ಅವರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲಾ ಅಧ್ಯಕ್ಷ ಹಯ್ಯಾಳಪ್ಪ ಅಚಿಕೇರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯಾದಗಿರಿ, ಸುರಪುರ, ಶಹಾಪುರ ತಾಲೂಕಿನಿಂದ ಕಟ್ಟಡ ಕಾರ್ಮಿಕರು, ಮತ್ತು ಅಧ್ಯಕ್ಷರು, ಪದಾಧಿಕಾರಿಗಳು ಆಗಮಿಸಿದ್ದರು. ಮುಖ್ಯ ಅಥಿತಿಗಳಾಗಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶ್ರಿನಿವಾಸವಹಿಸಿದ್ದರು. ಕಾರ್ಮಿಕ ಇಲಾಖೆಯ ನಿರೀಕ್ಷಕ ಗಂಗಾಧರ ಉಪಸ್ಥಿತರಿದ್ದರು. ನೂರಾರು ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.