ಮರೆಯಾದ ಸುರಪುರದ ಜೀಜಾಬಾಯಿ ತಿಮ್ಮಮ್ಮ ಗೌಡಸಾನಿ
ಮರೆಯಾದ ಮಾತೆ ಮಾಣಿಕ್ಯ ತಿಮ್ಮಮ್ಮ
@ ಮಣಿಕಂಠ ಜಿ.
ಯಾದಗಿರಿಃ ಅಮ್ಮಾ….ಅಮ್ಮಾ…..ಅಮ್ಮಾ….. ಮಕ್ಕಳ ಮಾತು ಆರಂಭವಾಗುವುದೇ ಅಮ್ಮಾ….ಎಂಬ ಮಾತಿನಿಂದ ಶಬ್ದದಿಂದ….. ತನ್ನ ಕರಳು ಬಳ್ಳಿ ಹಂಚಿಕೊಂಡು ತನ್ನ ಮಗುವಿಗೆ ಜನ್ಮ ನೀಡುವ ತಾಯಿ… ದೇವರಿಗೆ ಸಮ ಎನ್ನುತ್ತಾರೆ.
ಆದ್ರೆ ಆ ದೇವರನ್ನು ಕಾಣದ ನಾವು ತಾಯಿಯೇ ನಮಗೆ ದೇವರು…. ಈ ಮಾತು ಅತೀಶೋಕ್ತಿಲ್ಲ.. ಶಿವಾಜಿ ಮಹಾರಾಜನ ತಾಯಿ ಜೀಜಾಬಾಯಿಯಂತೆ ನಮ್ಮ ಸಗರ ನಾಡಿನಲ್ಲಿ… ಮೆರೆದ ಸುರಪುರದ ಆ ಮಹಾ ತಾಯಿ ನಮ್ಮ ತಿಮ್ಮಮ್ಮ ಗೌಡಸಾನಿ.
ಮೆದು ಮಾತಿನ ಮಮತೆಯ ಆಗರ, ಮಾತೃ ವಾತ್ಸಲ್ಯದ ಆ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದರೆ ನಂಬಲು ಅನರ್ಹವಾಗಿದೆ. ತಿಮ್ಮಮ್ಮ ಗೌಡಸಾನಿ ಇನ್ನಿಲ್ಲ ಅಂದರೆ ಅರಗಿಸಿಕೊಳ್ಳಲು ಸಾಧ್ಯವಾಗ್ತಾಯಿಲ್ಲ.
ಅಂದು ಪ್ರಥಮ ಬಾರಿ ರಾಜೂಗೌಡ ವಿಧಾನಸಭೆ ಚುನಾವಣಿಗೆ ನಿಂತಿದ್ರು, ಆಗ ರಾಜಕೀಯ ಕುತಂತ್ರದಿಂದ ಮತದಾನ ಇನ್ನೂ ನಾಲ್ಕೈದು ದಿನಗಳ ಇರುವಾಗ, ರಾಜೂಗೌಡ ಬಹಿರಂಗ ಪ್ರಚಾರ ಮಾಡದಂತೆ ಕೆಲ ರಾಜಕೀಯ ನಾಯಕರು,
ರಾಜೂಗೌಡರಿಗೆ ದೊರೆಯುತ್ತಿದ್ದ ಜನ ಬೆಂಬ ಕಂಡು ದಂಗಾಗಿದ್ದರು. ಆಗ ಅವರು ಮಾಡಿದ್ದ ತಂತ್ರಗಾರಿಕೆಯಿಂದ ರಾಜೂಗೌಡನನ್ನು ಜೈಲಲಿಟ್ಟು ಪ್ರಚಾರಕ್ಕೆ ಬಾರದಂತೆ ಮಾಡಿದ್ದರು.
ಅದೇ ಮೊದಲ ಚುನಾವಣೆ ಬೇರೆ , ಆಗ ಇದೇ ಅವರ ತಾಯಿ ತಿಮ್ಮಮ್ಮ ಗೌಡಸಾನಿ ಯುವ ಉತ್ಸಾಹಿ ರಾಜೂಗೌಡಗೆ ಎದೆಗುಂದಬೇಡ ಮಗ ನಾನಿದ್ದೇನೆ ಸತ್ಯಕ್ಕೆ ಜಯ ದೊರೆಯಲಿದೆ ಎಂದು ಸ್ವತಹಃ ತಿಮ್ಮಮ್ಮಗೌಡಸಾನಿ ಮಗನ ಪರವಾಗಿ ಪ್ರಚಾರ ಮಾಡಿದ ಫಲದಿಂದ ಆಗ ಮಗ ರಾಜೂಗೌಡ ವಿಜಯ ದುಂದುಬಿ ಬಾರಿಸಿದ್ದ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಅತಿ ಚಿಕ್ಕ ವಯಸ್ಸಿನ ಶಾಸಕನಾಗಿ ವಿಧಾನಸಭೆ ಮೆಟ್ಟಿಲೇರಿದ್ದರು.
ಇದೊಂದು ಐತಿಹಾಸಿಕ ದಾಖಲೆಗೆ ಗೌಡಸಾನಿಯ ಧೈರ್ಯವೇ ಕಾರಣವಾಗಿತ್ತು ಎಂದರೆ ತಪ್ಪಾಗಲಾರದು. ಆಗ ಛಲ ಬಿಡದ ಆ ಮಹಾ ಮಾತೇ ತಿಮ್ಮಮ್ಮ ಗೌಡಸಾನಿ, ಮಗನ ಪರವಾಗಿ ಖುದ್ಧ ಬಹಿರಂಗ ಚುನಾವಣಾ ಪ್ರಚಾರ ಕೈಗೊಂಡ್ರು. ಮನೆ ಮನೆಗೆ ತೆರಳಿ ಜನರ ಮನಗೆದ್ದಿದ್ದರು.
ಅದರ ಫಲವೇ ಮೊದಲ ಬಾರಿಗೆ ರಾಜೂಗೌಡ್ರು ವಿಧಾನ ಸಭೆ ಪ್ರವೇಶ ಮಾಡಲು ಸಾಧ್ಯವಾಯಿತು. ಹೀಗೆ ತಾಯಿ ಇದ್ದರೆ ಇರಬೇಕು ತಿಮ್ಮಮ್ಮ ಗೌಡಸಾನಿ ಎಂತೆ ಎನ್ನುವ ಮಾತು ಈ ಭಾಗದಲ್ಲಿ ಪ್ರಚಲಿತವಾಗಿದೆ.
ಅಂದಿನಿಂದ ಕೊನೆ ಉಸಿರು ಇರುವ ತನಕ ಕ್ಷೇತ್ರದ ಜನರ ಕಾಳಜಿ ಮತ್ತು ಬಂಧುಗಳ ಬಗ್ಗೆ ವಿಶೇಷ ಅಕ್ಕರೆ. 2009-2010ರಲ್ಲಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದ ಜನತೆಗೆ ಆಶ್ರಯ ನೀಡಿದ್ದರು.
ತಾವೇ ಖುದ್ಧಾಗಿ ನಿರಾಶ್ರಿತರ ಯೋಗಕ್ಷೇಮ ವಿಚಾರಿಸಿ ಅನರಿಗೆ ಸ್ವಂತ ತಾಯಿಯಂತೆ ಧೈರ್ಯ ತುಂಬುತ್ತಿದ್ದರು. ಇಂತಹ ನೂರಾರೂ ಉದಾಹರಣಿಗಳಿವೆ.
ಆದರೆ ಈ ಕಾರ್ಯ ಮಾಡುವಾಗ ಯಾವ ಪ್ರಚಾರ ಬಯಸುತ್ತಿರಲ್ಲಿಲ್ಲ. ತಾಯಿ ತನ್ನ ಮಕ್ಕಳ ಸೇವೆ ಮಾಡುವುದು ತಾಯಿಯ ಗುಣ ಧರ್ಮ. ಹೀಗಾಗಿ ಇದು ಪ್ರಚಾರ ಮಾಡುವುದು ಸರಿಯಲ್ಲವೆಂದು ಹೇಳ್ತಾಯಿದ್ರು.
ರಾಮ ಲಕ್ಷ್ಮಣರಂತೆ ಇಬ್ರು ಗಂಡು ಮಕ್ಕಳನ್ನು ಜನತೆಯ ಸೇವೆಗೆ ಅವರ ಜೀವನ ಮುಡಪಾಗಿಟ್ಟು ಇಹಲೋಕ ತ್ಯೇಜಿಸಿ ಹೋಗಿರುವುದು ಕಠೋರ ಸತ್ಯ.
ಜ.14 ಸ್ವಗ್ರಾಮ ಕೊಡೆಕಲ್ ನಲ್ಲಿ 12-30 ಗಂಟೆಗೆ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತಾ…
ವಿನಯ ವಾಣಿ ಪರವಾಗಿ ಭಾವ ಪೂರ್ಣ ಶೃದ್ಧಾಂಜಲಿ ಸಮರ್ಪಣೆ.. ಅಮ್ಮಾ…..ನೀನಗ್ಯಾರು ಸಮ…..