ಪ್ರಮುಖ ಸುದ್ದಿ
ಪುರಂದರದಾಸರ ಮಂಟಪ, ಸೀತೆ ಸೆರಗು ಮುಳುಗಡೆ
ಹಂಪಿಃ ಇಲ್ಲಿನ ತುಂಗಾಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಹಂಪಿ ಸ್ಮಾರಕಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಈಗಾಗಲೇ ಇಲ್ಲಿನ ಪುರಂದರದಾಸರ ಮಂಟಪ ಮತ್ತು ಸೀತೆ ಸೆರಗು ಮುಳುಗಡೆಯಾಗಿವೆ.
ಅಪಾರ ಪ್ರಮಾಣದ ಮಳೆಯಾದ್ದರಿಂದ ಹಳ್ಳಕೊಳ್ಳ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಹಂಪಿ ಸ್ಮಾರಕಗಳು ಮುಳುಗಡೆಯಾಗುತ್ತಿವೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗ್ತಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ನದಿ ಪಾತ್ರದ ಜನ ಎಚ್ಚರಿಕೆವಹಿಸುವ ಅಗತ್ಯವಿದೆ.