ಪ್ರಮುಖ ಸುದ್ದಿ
ನೆರೆ ಪರಿಹಾರ ದೊರೆಯದ್ದಕ್ಕೆ ಜಿಲೇಖಾ ಬೇಗಂ ಆತ್ಮಹತ್ಯೆ.!
ಯಾದಗಿರಿಃ ನೆರೆ ಹಾವಳಿಯಿಂದಾಗಿ ಕೃಷ್ಣಾ ತೀರದಲ್ಲಿದ್ದ ಅಂದಾಜು 6 ಎಕರೆ ಜಮೀನಿನಲ್ಲಿ ಹಾಕಲಾಗಿದ್ದ ಭತ್ತದ ಪೈರು ಹಾಳಾಗಿದ್ದು, ಕೈ ತುಂಬಾ ಸಾಲಾ ಮಾಡಿಕೊಂಡಿದ್ದ ರೈತ ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಗುಂಡ್ಲೂರ ಗ್ರಾಮದಲ್ಲಿ ನಡೆದಿದೆ.
ಜಿಲೇಖಾ ಬೇಗಂ 5 ಲಕ್ಷ ರೂ. ಸಾಲ ಹೊಂದಿದ್ದಳು ಎನ್ನಲಾಗಿದೆ. ಈ ಬಾರಿ ನೆರೆಯಿಂದ ಕೈಗೆಟುಕಲಿದೆ ಎಂದು ನಂಬಿದ್ದ ಭತ್ತದ ಪೈರು ನೆರೆಯಿಂದ ನೀರು ಪಾಲಾಗಿತ್ತು. ಹೀಗಾಗಿ ಕಳೆದ ಎರಡು ತಿಂಗಳಿಂದ ಚಿಂತೆಗೀಡಾಗಿದ್ದಳು ಎನ್ನಲಾಗಿದೆ. ಸಾಲ ಹೇಹೆ ತೀರಿಸಬೇಕೆಂಬ ಚಿಂತೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಕುರಿತ ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.