ಪ್ರಮುಖ ಸುದ್ದಿ
BREKKING-ಎಎಸ್ಐಗೆ ಗ್ರಾಮಸ್ಥರಿಂದ ಧರ್ಮದೇಟು
ಎಎಸ್ಐಗೆ ಗ್ರಾಮಸ್ಥರಿಂದ ಧರ್ಮದೇಟು
ದಾವಣಗೇರಾಃ ಗಣೇಶ ವಿಸರ್ಜನೆ ವೇಳೆ ಬಂದೋಬಸ್ತ್ ಗೆ ಆಗಮಿಸಿದ್ದ ಎಎಸ್ಐ ಓರ್ವನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ನಡೆದಿದೆ.
ಎಎಸ್ಐ ಓಬಳೇಶ ಎಂಬಾತನೇ ಗ್ರಾಮಸ್ಥರಿಂದ ಧರ್ಮದೇಟು ತಿಂದು ಠಾಣೆ ಸೇರಿದ್ದಾನೆ. ಎಎಸ್ಐ ಓಬಳೇಶ ಗ್ರಾಮದ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಅಲ್ಲದೆ ಗಣೇಶ ವಿಸರ್ಜನೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸಲು ಬಂದಿದ್ದ ಪೊಲೀಸಪ್ಪ ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೋಗಿ ಗ್ರಾಮಸ್ಥರ ಕೈಯಲ್ಲಿ ಮಹಿಳೆ ಸಮೇತ ಸಿಕ್ಕಿಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಆ ವೇಳೆ ಗಮನಿಸಿದ ಮಹಿಳೆ ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ಪೊಲೀಸಪ್ಪನನ್ನು ಚನ್ನಾಗಿ ಥಳಿಸಿ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.