ಪ್ರಮುಖ ಸುದ್ದಿ

ಸಂಪುಟ ರಚನೆ ಕಸರತ್ತು, ಡಿಕೆಶಿಗಿಲ್ಲ ಸಂಪುಟದಲ್ಲಿ ಸ್ಥಾನ

ಇಂಧನ ಸಮಾಧಾನಕ್ಕೆ ಹೆಚ್ಡಿಕೆ ಯತ್ನ

ಬೆಂಗಳೂರಃ ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ರಚನೆಗೆ ಸಾಕಷ್ಟು ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್-ಕಾಂಗ್ರೆಸ್ ಎರಡು ಪಕ್ಷಗಳ ಮುಖಂಡರು ಸಿದ್ಧ ಸೂತ್ರ ರಚಿಸಿ, ಅದಕ್ಕೊಂದು ಸಮನ್ವಯ ಸಮಿತಿ ರಚನೆ ಮಾಡಿದ್ದು ಅದರ ಅಧ್ಯಕ್ಷ ತಲಾ ಒಬ್ಬರಂತೆ ಪ್ರಮುಖ ಸದಸ್ಯರನ್ನು.ಒಳಗೊಂಡು ಮಾಜಿ ಸಿಎಂ ಸಿದ್ರಾಮಯ್ಯನವರನ್ನು.ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಶುಕ್ರವಾರ ಸಂಪುಟ ರಚನೆ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಕಸರತ್ತು ನಡೆಸಿ, 16+10 ಸೂತ್ರದಡಿ ಕಾಂಗ್ರೆಸ್ 16 ಜೆಡಿಎಸ್ 10 ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಿಕೊಳ್ಳಾಗಿದೆ.

ಅಲ್ಲದೆ ಐದು ವರ್ಷಗಳವರೆಗೆ ಸರ್ಕಾರ ಗಟ್ಟಿಯಾಗಿ ನಡೆಸುವ ನಿರ್ಧಾರವನ್ನು ಕಯಗೊಂಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೂ ಹೊಂದಾಣಿಕೆ ಮೂಲಕವೇ ಚುನಾವಣೆ ಎದುರಿಸುವ ಕುರಿತು ಎರಡು ಪಕ್ಷದ ಹೈಕಮಾಂಡ ಒಪ್ಪಿಗೆ ಸೂಚಿದೆ ಎನ್ನಲಾಗಿದೆ.

ಈ ನಡುವೆ ಡಿಕೆಶಿಗೆ ಯಾವ ಖಾತೆಯು ಹಂಚಿಕೆ ಮಾಡಲಿಲ್ಲ. ಈ ಅಸಮಾಧಾನ ಸರಿತೂಗಿಸಲು ಹೆಚ್.ಡಿ.ಕೆ. ಸಭೆ ನಂತರ ಡಿಕೆಶಿ ಕೈಕುಲುಕಿದ ಘಟನೆಯು ಜರುಗಿದೆ.

ಆದರೆ ಜೆಡಿಎಸ್  ಇನ್ನೊಂದು ಸಚಿವ ಸ್ಥಾನ ಉಳಿದಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button