ಪ್ರಮುಖ ಸುದ್ದಿ
ಶಹಾಪುರಃ ವಿದ್ಯುತ್ ಕಂಬಕ್ಕೆ ಬೆಂಕಿ ಗಾಬರಿಗೊಂಡ ಜನರು
ಮಳೆಯಲ್ಲಿ ಶಾರ್ಟ್ ಸರ್ಕ್ಯೂಟ್ಃ ವಿದ್ಯುತ್ ಕಂಬಕ್ಕೆ ಬೆಂಕಿ.! ಗಾಬರಿಗೊಂಡ ಪ್ರಯಾಣಿಕರು
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಬೀದರ- ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಚರಬಸವೇಶ್ವರ ಕಮಾನ್ ಹತ್ತಿರ ಸಿಟಿ ಲೈಟ್ ಕಂಬಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿ ಉರಿದು ಕೆಲ ನಿಮಿಷ ವಾಹನ ಸವಾರರನ್ನು ಗಾಬರಿಗೊಳಿಸಿದ ಘಟನೆ ನಡೆಯಿತು.
ಜೋರಾಗಿ ಬರುತ್ತಿರುವ ಮಳೆಯಲ್ಲಿಯೇ ವಿದ್ಯುತ್ ಕಂಬಕ್ಕೆ ಸಿಟಿ ಲೈಟ್ ಕೆಬಲ್ ಗೆ ಸ್ಪಾರ್ಕ್ ನಿಂದಾಗಿ ಬೆಂಕಿ ಹೊತ್ತಿ ಉರಿಯುತ್ತಿರುವದರಿಂದರಸ್ಎ ಪಕ್ಕದ ಅಂಗಡಿ ಮಾಲೀಕರು, ವಾಹನ ಸವಾರರು ಗಾಬರಿಗೊಂಡು ಬೆಂಕಿ ನಂದಿ ಹೋಗುವವರೆಗೆ ಸವಾರರು ರಸ್ತೆ ಬದಿ ನಿಂತರು.
ಕೆಲವೊಬ್ಬರು ದೂರದಿಂದ ಹಾಗೇ ತೆರಳಿದರು. ಜೋರಾಗಿದ್ದ ಮಳೆಗೆ ಬೆಂಕಿ ನಂದಿತು. ಸಿಟಿ ಲೈಟ್ ಆಫ್ ಆಗಿ ಕತ್ತಲಾವರಿಸಿತು. ಇನ್ನೂ ಮಳೆ ಜೋರಾಗಿದ್ದು, ಜನ, ವಾಹನ ಸಂಚಾರ ಸುಗಮವಾಗಿದೆ. ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಕೆಲವರು ಕಾಲ್ ಮಾಡಿ ತಿಳಿಸಿದರೆ, ಇನ್ನೂ ಕೆಲವರು ವಿಡಿಯೋ ಮಾಡುತ್ತಿರುವದು ಕಂಡು ಬಂದಿತು.