ದೇವೇಗೌಡರು, ದೇವೇಗೌಡರು ಆದದ್ದು ಹೀಗೆ ಅಲ್ಲವೇ… ದೊಡ್ಡತನ ಅಂದರೆ ಇದು!
ಕೋಲಾರ: ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದರು. ವಿವಿಧ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸಂಜೆ ಹೊತ್ತಿಗೆ ಕೋಲಾರದಿಂದ ಶ್ರೀನಿವಾಸಪುರದತ್ತ ಹೊರಟಿದ್ದರು. ಆಗ ಎಂಭತ್ತು ವರ್ಷದ ಹಿರಿಯಜ್ಜ ಮುನಿಯಪ್ಪ ಎಂಬುವರು ತಮಟೆ ಬಡೆಯುತ್ತ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಕಂಡ ದೇವೇಗೌಡರು ಕಾರಿನಿಂದ ಇಳಿದು ಮಾತನಾಡಿಸಿದ್ದಾರೆ. ಮುನಿಯಪ್ಪನೊಂದಿಗೆ ಕೈ ಕೂಡಿಸಿ ಈ ಇಳಿ ವಯಸ್ಸಿನಲ್ಲಿ ಇಷ್ಟೊಂದು ಕಷ್ಟ ಪಡುವುದೇಕೆ ಎಂದು ಪ್ರಶ್ನಿಸಿ ಅತ್ಯಾಪ್ತತೆಯಿಂದ ಯೋಗಕ್ಷೇಮ ವಿಚಾರಿಸಿದ್ದಾರೆ.
ಪಕ್ಷದ ಮುಖಂಡರನ್ನು ಕರೆದು ಮುನಿಯಪ್ಪನ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಸೂಕ್ತ ಸಹಕಾರ ನೀಡಿ ಎಂದು ಸೂಚಿಸಿದ್ದಾರೆ. ಈ ವೇಳೆ ದೇವೇಗೌಡರು ಸಹ ನನ್ನ ಸಮಕಾಲೀನರು. ಆದರೂ ರೈತರ ಪರವಾಗಿ ಹೋರಾಟ ಮಾಡುತ್ತ ರಾಜ್ಯದ ತುಂಬ ಯುವಕರಂತೆ ಓಡಾಡುತ್ತಿದ್ದಾರೆ. ಅಂಥ ದೊಡ್ಡಗೌಡರು ನನ್ನನ್ನು ಗುರುತಿಸಿ ಕಷ್ಟ, ಸುಖ ಕೇಳಿ ಮಾತನಾಡಿಸಿದರಲ್ಲ ಅಷ್ಟೇ ಸಾಕು. ಅದಕ್ಕಿಂತ ದೊಡ್ಡದೇನಿದೆ ಎಂದು ಮುನಿಯಪ್ಪ ಖುಷಿ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ದೊಡ್ಡತನ ನಿಜಕ್ಕೂ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ.