ಮತ್ತೆ ಜೈಲಿಗೆ ಹೋಗ್ತೀರಿ ಹುಷಾರ್ : ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ
ಚಿಕ್ಕಮಗಳೂರು : ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡದೆ ವ್ಯಾಪಾರ ಮಾಡಲು ಬಿಟ್ಟರೆ ಈ ಹಿಂದೆ ಜೈಲಿಗೆ ಹೋಗಿದ್ದಿರಲ್ಲ ಹಾಗೇ ಮತ್ತೆ ಜೈಲಿಗೆ ಹೋಗ್ತೀರಿ ಹುಷಾರ್ ಎಂದು ಸಿಎಂ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. ರಾತ್ರೋರಾತ್ರಿ ನೀವು ವರ್ಗಾವಣೆ ಮಾಡಿದ್ದು ಗೊತ್ತಿದೆ. ಕೃಷ್ಣ ಕಚೇರಿ ಮಾರ್ಕೇಟ್ ದಂಧೆ ಮಾಡಿಕೊಂಡು ಕುಳಿತಿದ್ದೀರಿ. ಅಂಥ ಕೆಲಸ ನನ್ನ ಮಗನ ಕೈಯಿಂದ ನಾನು ಮಾಡಿಸಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕೆ ವಿರುದ್ಧ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಟ್ವೀಟ್ ಮೂಲಕ ಟೀಕಿಸಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕೆಂಡಾ ಮಂಡಲವಾಗಿದ್ದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಸರ್ಕಾರದ ವಿರುದ್ಧ ಟೀಕಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ಪುತ್ರ ಟ್ವೀಟ್ ಮಾಡಿ “ಕಮೀಷನ್ ದಂಧೆ ,ವರ್ಗಾವಣೆ ದಂಧೆ,ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ ಕುಮಾರ ಸ್ವಾಮಿಯವರೇ, “ಕೋತಿ ತಾನು ತಿಂದು ಮೇಕೆ ಬಾಯಿಗೆವರೆಸಿ ದಂತಿದೆ “ನಿಮ್ಮ ಮಾತುಗಳು. CBI ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ ವಿಷಯಾಂತರಗೊಳಿಸಿ ಜನತೆಯ ಧಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದಿದ್ದರು.”