ಪ್ರಮುಖ ಸುದ್ದಿ
ಸಿಎಂ ಸಿದ್ಧರಾಮಯ್ಯ ಅವರಪ್ಪನ ಮೇಲಾಣೆ ಮಾಡಲಿ – ಹೆಚ್.ಡಿ.ಕೆ ಗರಂ!
ಬೆಳಗಾವಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿ ಕಾರ್ಯಕ್ರಮದಲ್ಲಿ ಅವರಪ್ಪನ ಮೇಲಾಣೆ ಅವರು ಸರ್ಕಾರ ರಚಿಸಲ್ಲ, ಅವರು ಮುಖ್ಯಮಂತ್ರಿ ಆಗಲ್ಲ ಅಂತೆಲ್ಲಾ ಹೇಳ್ತಿದ್ದಾರೆ. ನಮ್ಮಪ್ಪ ಇವರಿಗೆ ಬಿಟ್ಟಿಯಾಗಿ ಸಿಕ್ಕಿದ್ದಾರೆಯೇ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಬೇಕಿದ್ರೆ ಸಿದ್ಧರಾಮಯ್ಯ ಅವರ ಅಪ್ಪನ ಮೇಲೆ ಆಣೆ ಮಾಡಿಕೊಳ್ಳಲಿ ಎಂದು ಗುಡುಗಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಮನ ಬಂದಂತೆ ಮಾತನಾಡಿ ಮುಖ್ಯಮಂತ್ರಿ ಸ್ಥಾನದ ಗೌರವ ಘನತೆ ಕಡಿಮೆ ಮಾಡುವುದು ಸರಿಯಲ್ಲ. ಸಿದ್ಧರಾಮಯ್ಯ ಅವರು ಯಾವ ಯಾವ ಕಾಲದಲ್ಲಿ ಯಾರ ಯಾರ ಕಾಲು ಹಿಡಿದಿದ್ದಾರೆ ಎಂಬುದು ನನಗೂ ಗೊತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಕಿಡಿ ಕಾರಿದ್ದಾರೆ.