ಪ್ರಮುಖ ಸುದ್ದಿ
JDS ಬಿಜೆಪಿಯ Bಟೀಮ್ ಅಂದ ರಾಹುಲ್ ಗಾಂಧಿಗೆ ಹೆಚ್.ಡಿ.ಕೆ ಅಚ್ಚರಿ ಉತ್ತರ!
ಬೆಂಗಳೂರು: ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಅವರ ಅಪ್ರಬುದ್ಧತೆ ಬಗ್ಗೆ ನನಗೆ ಮರುಕುವಿದೆ. ಪಾಪ, ಯಾರೋ ಬರೆದು ಕೊಟ್ಟದ್ದನ್ನು ಅವರು ಓದಿರಬಹುದು ಎಂದು ಜೆಡಿಎಸ್ ರಾಜ್ಯದ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಪಕ್ಷ ಬಿಜೆಪಿಯ ಬಿಟೀಮ್ ಎಂದು ನಿನ್ನೆಯಷ್ಟೇ ಹಾಸನದಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂಲ ಯಾವುದು ಗೊತ್ತಾ?. ಜೆಡಿಎಸ್ ಒಡೆದು ರಾಜ್ಯ ಕಾಂಗ್ರೆಸ್ ಕಟ್ಟಲಾಗಿರುವುದು ಗೊತ್ತಿಲ್ಲವೇ?. ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ ಯಾವ ಪಕ್ಷ ಸೇರಿದ್ದಾರೆ?. ಎಂದು ಹಲವು ಪ್ರಶ್ನೆಗಳನ್ನು ಮಾಧ್ಯಮ ಮೂಲಕ ರಾಹುಲ್ ಗೆ ಕೇಳಲು ಬಯಸುತ್ತೇನೆ ಎಂದಿದ್ದು ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಕಾಂಗ್ರೆಸ್ಸಿಗರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.