HDK ಯನ್ನೆ ಉಚ್ಛಾಟನೆ ಮಾಡಲು ನಿಂತರೇ JDS ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ?
ಓರಿಜಿನಲ್ JDS ನಮ್ಮದೆ - ಸಿಎಂ ಇಬ್ರಾಹಿಂ
HDK ಉಚ್ಛಾಟನೆಗೂ ಅಭಿಪ್ರಾಯ ಬಂದಿದೆ – ಸಿಎಂ ಇಬ್ರಾಹಿಂ
ಓರಿಜಿನಲ್ JDS ನಮ್ಮದೆ – ಸಿಎಂ ಇಬ್ರಾಹಿಂ
NDA ಜತೆ JDS ಹೋಗಲ್ಲ
ವಿವಿ ಡೆಸ್ಕ್ಃ ಓರಿಜಿನಲ್ ಜೆಡಿಎಸ್ ನಮ್ಮದೆ. ಇದು ನನ್ನ ಮನೆ ನಾನ್ಯಾಕೆ ಬಿಟ್ಟು ಹೋಗಬೇಕು. ನಾವೆಂದಿಗೂ ಎನ್ ಡಿಎ ಜತೆ ಸೇರಲ್ಲ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ತಮ್ಮ ನೇತೃತ್ವದಲ್ಲಿ ಸಭೆ ಕರೆದ ಅವರು ಇಂದು ಸಭೆಯಲ್ಲಿ ಚರ್ಚಿಸಿದ ಹಲವು ಅಭಿಪ್ರಾಯ ಕ್ರೋಢಿಕರಿಸಿ ಈ ಹೇಳಿಕೆಯನ್ನು ನೀಡಿದ್ದಾರೆ.
ಸಭೆಯಲ್ಲಿ ಎಚ್ ಡಿಕೆ ಅವರನ್ನೆ ಉಚ್ಛಾಟನೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದ ಅವರು, ನಾವು ಓರಿಜನಲ್ ಜೆಡಿಎಸ್ ಅವರ್ಯಾರು ಪಕ್ಷದ ಕುರಿತು ಮಾತನಾಡಲಿಕ್ಕೆ, ನಾವು ಜೆಡಿಎಸ್ ನಲ್ಲಿಯೇ ಇರ್ತೀವಿ.
ಈಗಾಗಲೇ ಕೇರಳ, ತಮಿಳುನಾಡು, ಮಹಾರಾಷ್ಟ್ರ ದ ಜೆಡಿಎಸ್ ಅವರೆಲ್ಲ ತಮ್ಮ ದಾರಿ ತಾವೂ ನೋಡಿಕೊಂಡಿದ್ದಾರೆ. ನಾನು ಪಕ್ಷದ ರಾಜ್ಯಧ್ಯಕ್ಷ ಮುಂದೆ ನಮ್ಮ ಪಕ್ಷದ 19 ಶಾಸಕರನ್ನು ಖುದ್ದಾಗಿ ಭೇಟಿ ಮಾಡಿ ಮನವೊಲಿಸಲು ಯತ್ನಿಸುವೆ ಏನಾಗಲಿದೆ ಎಂಬುದು ಕಾದು ನೋಡೋಣ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.