ಪ್ರಮುಖ ಸುದ್ದಿ

ಸರ್ಕಾರಿ ನಿವೇಶನ ನಿಯಮಬಾಹಿರ ಮಾರಾಟ- ಹೈಕೋರ್ಟ್ ತೀರ್ಪು

ಸರ್ಕಾರಿ ಸುಪರ್ದಿಗೆ ಪಡೆಯಲು ಆರು ವಾರಗಳ ಗಡುವು

ಕಲಬುರಗಿ: ಕಲಬುರಗಿ ನಗರದ ಸುಪರ್ ಮಾರ್ಕೆಟ್ (ಹಳೇ ಕಾರಾಗೃಹ) ಸ್ಥಳದ ನಿವೇಶನ ಸಂಖ್ಯೆ 145, 146 ಮತ್ತು 147 ನಿವೇಶನಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಿದ್ದು, ಈ ಕೂಡಲೇ ಆರು ವಾರಗಳಲ್ಲಿ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ಪಡೆಯುವಂತೆ ಕರ್ನಾಟಕ ಉಚ್ಛ ನ್ಯಾಯಾಲಯ ಆದೇಶ ನೀಡಿದೆ ಎಂದು ಮಾಜಿ ಸಚಿವ ಎಸ್.ಕೆ.ಕಾಂತ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ನಗರದ ಸೂಪರ್ ಮಾರ್ಕೇಟ್ ವ್ಯಾಪಿಯ 3 ನಿವೇಶಗಳನ್ನು ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ (2004) ವಿಶ್ವನಾಥ ನಾಡಗೌಡ ಎಂಬುವರು ಸರ್ಕಾರ ಹಾಗೂ ಸೂಪರ್ ಮಾರ್ಕೇಟ್ ಕಮಿಟಿಯಲ್ಲಿ ನಿಯಮಬಾಹಿರವಾಗಿ ಖರೀದಿ ಮಾಡಿದ್ದರು.

ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿ ಹಾಗೂ ಸೂಪರ್ ಮಾರ್ಕೆಟ್ ಕಮಿಟಿಯ ಅಧ್ಯಕ್ಷರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗೂ ಪತ್ರ ಬರೆದಿದ್ದರು. ಆದರೆ ಸರ್ಕಾರ ಸರ್ವರ ಮಾತಿಗೆ ಕಿವಿಗೊಡದೆ ಸ್ಥಳವನ್ನು ಖಾಸಗಿ ವ್ಯಕ್ತಿಗೆ ಹಂಚಿಕೆ ಮಾಡಿದ್ದರು. ಸ್ಥಳವನ್ನು ಮಾರಾಟ ಮಾಡಿರುವ ಕುರಿತು ವಿಷಯವನ್ನು ಸುಮಾರು 18 ತಿಂಗಳವರೆಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಗಮನಕ್ಕೂ ತರದಿರುವ ಬಗ್ಗೆ ಅವರು ಪತ್ರದಲ್ಲಿ ಅಸಮಾಧನ ವ್ಯಕ್ತಪಡಿಸಿದ್ದರು.

ಸರ್ಕಾರದ ಕಾಗದ ಪತ್ರಗಳು ಹಾಗೂ ಸಾಕ್ಷಾಧ್ಯಾರಗಳನ್ನು ಕೂಲಂಕಷವವಾಗಿ ಪರಿಶೀಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಅಭಯ ಓಕಾ ಹಾಗೂ ನ್ಯಾಯಮೂರ್ತಿಗಳಾದ ಎಸ್‍ಆರ್ ಕೃಷ್ಣ ಕುಮಾರ ನೇತೃತ್ವದ ದ್ವಿಸದಸ್ಯರ ಪೀಠ ಕಳೆದ ತಿಂಗಳ 28 ರಂದು ತೀರ್ಪು ನೀಡಿದೆ.

ತೀರ್ಪಿನ ಪ್ರಕಾರ ಸರ್ಕಾರಿ ಆಸ್ತಿಯನ್ನು ಮಾರಾಟ ಮಾಡಿರುವುದು ನಿಯಮ ಬಾಹಿರ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ಸದರಿ ನಿವೇಶನಗಳನ್ನು ಸರ್ಕಾರಿ ಆಸ್ತಿ ಎಂದು ನಮೂದು ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ನ್ಯಾಯಾಲಯ ತೀರ್ಪು ಪ್ರಕಟವಾದ 6 ವಾರಗೊಳಗೆ ನಿವೇಶನಗಳನ್ನು ಸರ್ಕಾರ ಸುಪರ್ದಿಗೆ ಪಡೆಯಬೇಕು. ಅಲ್ಲದೇ ಖರೀದಿದಾರರಿಂದ ಪಡೆದ ಹಣವನ್ನು ಮರಳಿಸುವಂತೆ ಸೂಚನೆ ನೀಡಿದೆ ಎಂದು ಅವರು ಹೇಳಿದರು.
ಸರ್ಕಾರ ಆಸ್ತಿಗಳ ರಕ್ಷಣೆಗಾಗಿ ತಾವು ನಿರಂತರ ಹೋರಾಟ ಮಾಡುತ್ತಿದ್ದು, ಮುಂದೆ ಹೋರಾಟ ನಡೆಸುವುದಾಗಿ ಈ  ಸಂದರ್ಭದಲ್ಲಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button