ಹೀಜಾಬ್ ವಿವಾದಃ ಅಂತಿಮ ತಿರ್ಪು ಹೊರ ಬೀಳಲು ಇನ್ನೊಂದೆ ತಾಸು ಬಾಕಿ
ವಿವಿ ಡೆಸ್ಕ್ಃ ಹಿಜಾಬ್ ವಿವಾದ ಕರ್ನಾಟಕದಲ್ಲಿ ಕಳೆದ ತಿಂಗಳಿಂದ ಭುಗಿಲೆದ್ದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರ ವಿರೋಧ ನಿಲುವಿನಿಂದ ಪ್ರತಿಭಟನೆಗಳು ನಡೆದು ಹಲವಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿರುವದರಿಂದ ತಾತ್ಕಾಲಿಕ ಆದೇಶ ನೀಡುವ ಜೊತೆಗೆ ಶಾಲಾ ಕಾಲೇಜು ಆರಂಭಿಸಲು ಅನುಮತಿ ನೀಡಿತ್ತು. ಆದಾಗ್ಯು ದಿನ ನಿತ್ಯ ವಿವಾದ ಮುಂದುವರೆಯುತ್ತಲೇ ಸಾಗಿತ್ತು.
ನ್ಯಾಯಾಲಯದಲ್ಲಿ ಈಗಾಗಲೇ 11 ದಿನಗಳ ಕಾಲ ವಾದ ವಿವಾದ ಆಲಿಸಿದ ಪೂರ್ಣ ಪೀಠ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದೆ.
ಹೀಗಾಗಿ ತೀರ್ಪು ಯಾವುದೇ ರೀತಿ ಹೊರಬರಬಹುದು ಪರ ವಿರೋಧಿ ಯಿಂದ ಮತ್ತೆ ಭುಗಿಲೆದ್ದು ಶಾಂತಿ ಸುವ್ಯವಸ್ಥೆ ಹಾಳಾಗಬಾರದೆಂಬ ಕಾರಣಕ್ಕೆ ರಾಜ್ಯದ ಹಲವಡೆ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 144 ಜಾರಿಯಾಗಿದೆ. ಅಲ್ಲದೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಯಾವುದಕ್ಕೂ ಪರ ವಿರೋಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ, ನ್ಯಾಯಾಲಯದ ತೀರ್ಪು ಅಂತಿಮವಾಗಿದ್ದು, ಎಲ್ಲರೂ ತಲೆಬಾಗಿ ಗೌರವಿಸಬೇಕಿದೆ.
ಆ ನಿಟ್ಟಿನಲ್ಲಿ ಪಾಲಕರು, ಹಿರಿಯರು ಮುಖ್ಯವಾಗಿ ರಾಜಕಾರಣಿಗಳು ಯಾವುದಕ್ಕೂ ಪುಷ್ಠಿ ನೀಡದೆ, ಸಂವಿಧಾನದ ಪ್ರಕಾರ ನ್ಯಾಯಾಲಯದ ಆದೇಶಕ್ಕೆ ಗೌರವಿಸಿ ಮುನ್ನಡೆಯುವದು ಒಳಿತು.