ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಹೈತೀರ್ಪು
ಇಸ್ಲಾಂ ಧಾರ್ಮಿಕ ಉಲ್ಲಂಘನೆ ಆಗಲ್ಲ – ಹೈಕೋರ್ಟ್ ತೀರ್ಪು
ವಿವಿ ಡೆಸ್ಕ್ಃ ಹಿಜಾಬ್ ವಿವಾದ ಕುರಿತು ಇದೀಗ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಹಿಜಾಬ್ ಧರಿಸುವದು ಕಡ್ಡಾಯವಲ್ಲ. ಆಯಾ ಶಾಲಾ, ಕಾಲೇಜು ವಸ್ತ್ರ ಬಳಸುವದು ವಿದ್ಯಾರ್ಥಿಗಳ ಕರ್ತವ್ಯ.
ಹಿಜಾಬ್ ಧರಿಸುವದು ಇಸ್ಲಾಂ ಧಾರ್ಮಿಕ ಹಕ್ಕು ಉಲ್ಲಂಘನೆ ಆಗಲ್ಲವೆಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ಹಿಜಾಬ್ ಧರಿಸಲು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಅರ್ಜಿ ಹೈಕೋರ್ಟ್ ವಜಾಗೊಳಿಸಿದೆ.
ಹಿಜಾಬ್ ಗೆ ತೀವ್ರ ಮುಖಭಂಗವಾಗಿದ್ದು, ಖುರಾನ್ 24 ನೇ ಅಧ್ಯಾಯ ಉಲ್ಲೇಖ ಮಾಡಲಾಗಿತ್ತು.
ಆದರೆ ಸಂವಿಧಾನದನ್ವಯ ಹೈಕೋರ್ಟ್ ವಾದ ವಿವಾದ ಆಲಿಸಿ ಹಲವು ರಾಜ್ಯಗಳಲ್ಲಿ ಹಿಜಾಬ್ ಕುರಿತು ನೀಡಿದ ತೀರ್ಪು ಅನುಸರಿಸಿ ಇಲ್ಲಿನ ಪೂರ್ಣ ಪೀಠ ಅಂತಿಮ ತೀರ್ಪು ನೀಡಿದೆ.
ಖುರಾನ್ ನಲ್ಲಿ ವಿದೇಶಕ್ಕೆ ಹೋಗುವಾಗ ಹಿಜಾಬ್ ಧರಿಸುವದು ಕಡ್ಡಾಯವಿದೆ. ಆದರೆ ತಮ್ಮದೆ ದೇಶದಲ್ಲಿ ಶಾಲಾ ಕಾಲೇಜು ಕೋಣೆಗಳಿಗೆ ಹೋದಾಗ ಹುಜಾಬ್ ಧರಿಸುವದು ಕಡ್ಡಾಯವಿಲ್ಲ ಎಂದು ಉಲ್ಲೇಖವಿದೆ ಎಂದು ಹೈಕ ಗಮನಕ್ಕೆ ವಕೀಲರು ತಂದಿದ್ದರು ಎನ್ನಲಾಗಿದೆ. ಕಾನೂನು ಸಮರದಲ್ಲಿ ಹಿಜಾಬ್ ಗೆ ಹಿನ್ನಡೆಯಾದ ಪರಿಣಾಮ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಸ್ಲಿಂ ಮುಖಂಡರು ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲಿವರೆಗೂ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಾಗುತ್ತದೆ.