ಪ್ರಮುಖ ಸುದ್ದಿ

ನಗರದಲ್ಲೆಡೆ ಹೋಳಿ ಸಂಭ್ರಮ ಸಡಗರ, ವಿದ್ಯಾರ್ಥಿನಿಯರು, ಮಹಿಳೆಯರಿಂದಲೂ ಸಂಭ್ರಮ

 

ವಿದ್ಯಾರ್ಥಿನಿಯರು, ಬಡಾವಣೆ ಮಹಿಳೆಯರು ಓಕುಳಿಯಲ್ಲಿ ಭಾಗಿ

ಯಾದಗಿರಿಃ ಜಿಲ್ಲೆಯ ಶಹಾಪುರ ಪಟ್ಟಣದ ಗಣೇಶ ನಗರದಲ್ಲಿ ಶುಕ್ರವಾರ ಯುವತಿಯರು, ಮಹಿಳೆಯರು ಬಣ್ಣದಾಟದಲ್ಲಿ ಮಿಂದೇಳುವ ಮೂಲಕ ಹೋಳಿ ಸಡಗರ ಸಂಭ್ರಮದಲ್ಲಿ ಮುಳುಗಿದ್ದರು. ನಗರದ ಚರಬಸವೇಶ್ವರ ವಸತಿ ನಿಲಯದ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ರಂಗಿನಾಟವಾಡಿದರು. ಪರಸ್ಪ್ರರು ಬಣ್ಣ ಎರಚಿ ಕುಣಿದು ಸಂಭ್ರಮಿಸಿದರು.

ಅದರಂತೆ ವಿವಿಧ ಬಡಾವಣೆಗಳಲ್ಲಿ, ಪ್ರಮುಖ ರಸ್ತೆ ಮೇಲೆ ಮಕ್ಕಳು, ಯುವ ಸಮೂಹಗಳು ಪ್ರಮುಖ ರಸ್ತೆಗಳಲ್ಲಿ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸುತ್ತಿರುವುದು ಕಂಡು ಬಂದಿತು.

ಅಲ್ಲದೆ ಬೇರೆಡೆ ಕಾಮ ದಹನದ ನಂತರ ಬಣ್ಣದಾಟವಾಡಿದರೆ, ಶಹಾಪುರದಲ್ಲಿ ಮಾತ್ರ ಓಕುಳಿ ಆಡಿದ ನಂತರ ಕಾಮ ದಹಿಸುವ ವಾಡಿಕೆ ಪ್ರಾಚೀನ ಕಾಲದಿಂದಲೂ ಬಂದಿದೆ. ಅಂತೇಯೇ ಶುಕ್ರವಾರ ಪಟ್ಟಣದ ಗಾಂಧಿ ಚೌಕ್, ದಿಗ್ಗಿ ಬೇಸ್ ಹತ್ತಿರ, ಗಣೇಶ, ಬುದ್ಧ, ಲಕ್ಷ್ಮೀ ನಗರ, ಗುತ್ತಿಪೇಟೆ ಸೇರಿದಂತೆ ಇತರಡೆ ಕಾಮದಹನ ಮಾಡಲಾಯಿತು.

ಕಾಮ ದಹಿಸುವ ಮುಂಚೆ ಬಡಾವಣೆಯ ಮಹಿಳೆಯರು ಕಾಮದೇವನಿಗೆ ಹೋಳಿಗೆ, ಕಡಬು ಸೇರಿದಂತೆ ಖಾದ್ಯ ಪದಾರ್ಥಗಳ ನೈವೇದ್ಯವನ್ನು ಸಾಂಪ್ರದಾಯದಂತೆ ಅರ್ಪಿಸಿದರು.

ಬೆಳಗ್ಗೆಯಿಂದಲೇ ಪಟ್ಟಣದಾದ್ಯಂತ ಬಣ್ಣದ ಓಕುಳಿ ಸಡಗರ ಸಂಭ್ರಮ ಮನೆ ಮಾಡಿತ್ತು. ಹೋಳಿ ಹಬ್ಬದಂಗವಾಗಿ ವ್ಯಾಪಾರ ವ್ಯವಹಾರಕ್ಕೆ ಅಲ್ಪ ಬ್ರೇಕ್ ಹಾಕಲಾಗಿತ್ತು. ಬೆಳಗ್ಗೆಯಿಂದಲೇ ಮಕ್ಕಳು, ಹಿರಿಯರು ಮಹಿಳೆಯರು ಸೇರಿದಂತೆ ಯುವತಿಯು ಪರಸ್ಪರರು ಬಣ್ಣ ಹಚ್ಚುವ ಮೂಲಕ ಸಂತಸ ಹಂಚಿಕೊಂಡರು.
ಹಲವಡೆ ಮಕ್ಕಳಿಂದ ನಡೆದ ಅಣಕು ಶವ ಪ್ರದರ್ಶನ ಓಕುಳಿ ಹಬ್ಬಕ್ಕೆ ರಂಗು ತಂದಿತು. ಉಳಿದಂತೆ ಹಲವಡೆ ಹಲಗೆ ನಾದಕ್ಕೆ, ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ನಗರದ ಹಲವಡೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button