ಪ್ರಮುಖ ಸುದ್ದಿ
ಪೊಲೀಸರ ದೌರ್ಜನ್ಯ, ಅಪರಾಧ ವಿರುದ್ಧ ದೂರು ನೀಡಲು ವ್ಯವಸ್ಥೆ – ಆರಗ ಜ್ಞಾನೇಂದ್ರ
ಪೊಲೀಸರ ದೌರ್ಜನ್ಯ, ಅಪರಾಧ ವಿರುದ್ಧ ದೂರು ನೀಡಲು ವ್ಯವಸ್ಥೆ – ಆರಗ ಜ್ಞಾನೇಂದ್ರ
ಮೈಸೂರಃ ಪೊಲೀಸರಿಂದಲೂ ಅಪರಾಧಗಳು ನಡೆಯುತ್ತಿವೆ. ನ್ಯಾಯಕ್ಕಾಗಿ ಠಾಣೆಗೆ ಬಂದ ನೊಂದವರನ್ನೆ ಬೆದರಿಸಿ ಅವರ ಮೆಲೆ ದೌರ್ಜನ್ಯ ನಡೆಸಿರುವ, ಪ್ರಕರಣ ದಾಖಲಿಸಿರುವ ಸಾಧ್ಯತೆ ಕುರಿತು ಸಾಕಷ್ಟು ದೂರುಗಳು ಬಂದಿವೆ.
ಆ ಹಿನ್ನೆಲೆ ಪೊಲೀಸರು ಮಾಡಿದ ಅಪರಾಧ, ದೌರ್ಜನ್ಯ ವಿರುದ್ಧ ದೂರು ನೀಡುವ ವ್ಯವಸ್ಥೆ ಕಲ್ಪಿಸುವ ವಾತಾವರಣ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಪೊಲೀಸರ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವದು ಎಂದರು.