ಸಾಹಿತಿ ಸಿದ್ಧರಾಮ ಹೊನ್ಕಲ್ ರಚಿಸಿದ ಗಜಲ್..
*ಗಜಲ್*
“”‘””””””
ಅಧಿಕಾರ ಮದದಿ ಕುಣಿಯುತ ಅಸಹಾಯಕರ ಸದೆ ಬಡೆದ..
ಎಷ್ಟು ಸುಂದರವಾಗಿತ್ತು ಈ ಪ್ರಪಂಚ ತಿಂಗಳು ಮುಂಚೆ ತನ್ನಷ್ಟಕ್ಕೆ ತಾನೇ ತೇಲುತಲಿತ್ತು ಸಾಕಿ
ಕುಣಿಯುತಿತ್ತು ಕುಡಿಯುತ್ತಿತ್ತು ಓಡುತಲಿತ್ತು ಆನಂದದಿ ತಾನೇ ನಲಿಯುತ್ತಲಿತ್ತು ಸಾಕಿ
ಇಷ್ಟು ಸುಂದರ ಪ್ರಪಂಚ ಸ್ವರ್ಗದಲ್ಲೂ ಇರಲಿಕ್ಕಿಲ್ಲವೆಂಬ ಭಾವ ಬಹುತೇಕ ಎಲ್ಲರದಾಗಿತ್ತು ಸಾಕಿ
ಕನಸ್ಸು ಯಾವುದೋ ನನಸು ಯಾವುದೋ ಅನ್ನೋ ಆನಂದದಲಿ ತಾನೇ ಮುಳುಗಿತ್ತು ಸಾಕಿ
ಅಧಿಕಾರ ಮದದಿ ಕುರುಡು ಕಾಂಚಾಣ ಕುಣಿಯುತಲಿತ್ತು ಅಸಹಾಯಕರನ್ನೆಲ್ಲ ತುಳಿಯುತಲಿತ್ತು ಸಾಕಿ
ನಾನು ನಾನೆಂಬ ಅಟ್ಟಹಾಸದಿ ಮೆರೆಯುತಲಿತ್ತು, ಎದುರಾದವರಿಗೆ ತಾನೇ ಹಣಿಯುತಲಿತ್ತು ಸಾಕಿ
ಹಣ ಅಧಿಕಾರ ಆಸ್ತಿ ಪಾಸ್ತಿ ಅಂತಸ್ತುಗಳ ಅಹಂಕಾರದಿ ಕುರುಡಾಗಿ ನೆಗೆಯುತಲಿತ್ತು ಸಾಕಿ
ಹಗಲು ಯಾವುದೋ ರಾತ್ರಿಯಾವುದೋ ಅರಿಯದಂತೆ ಮಾದಕ ಬೆಳಕಲಿ ತಾನೇ ಮೆರೆಯುತಲಿತ್ತು ಸಾಕಿ
ಕಂಡು ಕೇಳರಿಯದ ಭಯಾನಕ ಸಾವಿನ ಭಯ ಕಾಡುವುದೆಂಬ ನೆನಪೇ ಮರೆಯಾಗಿತ್ತು ಸಾಕಿ
ಹೊನ್ನಸಿರಿ’ ಹುಟ್ಟಿದಾಗಲೇ ಸಾವು ಬೆನ್ನಿಗಿರುವದೆಂಬ ಸತ್ಯ ಗೊತ್ತಿದ್ದರೂ ದುರಾಶೆ ತಾನೇ ಕೆರಳಿಸುತಲಿತ್ತು ಸಾಕಿ
ಇದು ಎಂದಿಗೆ ಮುಗಿದಿತೋ,ಮತ್ತೆ ಮೊದಲಿನಂತಾದಿತೋ ಎಂದು ಇಡೀ ಜಗತ್ತು ಕಾಯುತ್ತಲಿತ್ತು ಸಾಕಿ
ನಿರಾಕಾರನೇ ಸಾಕು ಮುಗಿಸು ಇನ್ನೂ,ನಶ್ವರತೆ ಮನುಷ್ಯತ್ವ ಕಲಿಸುವದಕೆ ಇದು ಸ್ವಲ್ಪಬೇಕಿತ್ತು ಸಾಕಿ
🌷-ಸಿದ್ಧರಾಮ ಹೊನ್ಕಲ್,
ಸಮಾಜಶಾಸ್ತ್ರ ಬೋಧಕರು, ಕಾವ್ಯಾಲಯ, ಲಕ್ಷ್ಮೀನಗರ ಅಂಚೆ-ಶಹಾಪುರ, ಯಾದಗಿರಿ ಜಿಲ್ಲೆ.೯೯೪೫೯೨೨೧೫೧
ಗಜಲ ಸ್ವರೂಪ ಇನ್ನೂ ಪಡೆದುಕೊಳ್ಳಬೇಕು. ಗದ್ಯ ಓದಿದಂತೆ ಭಾಸವಾಗುತ್ತದೆ.