ಪ್ರಮುಖ ಸುದ್ದಿ
ಬಿಜೆಪಿ ಶಾಸಕ ರೇಣುಕಾಚಾರ್ಯ ‘ಹೊನ್ನಾಳಿ ಹುಲಿ’ ಅಂತೆ!
ಚಿತ್ರದುರ್ಗ: ನಾನು ಮಂತ್ರಿಗಿರಿಗಾಗಿ ಭಿಕ್ಷೆ ಬೇಡುವುದಿಲ್ಲ, ಬೇಕಿದ್ದರೆ ಸಿಎಂ ಯಡಿಯೂರಪ್ಪ ಅವರ ಬಳಿ ಹೋಗಿ ಪಟ್ಟುಹಿಡಿದು ಕೂಡುವ ಶಕ್ತಿ ನನಗಿದೆ. ನಾನು ಹೊನ್ನಾಳಿ ಹುಲಿ , ಗಟ್ಟಿ ಬಂಡೆ ಯಾವುದಕ್ಕೂ ಕರಗುವುದಿಲ್ಲ ಎಂದು ಮಾಜಿ ಸಚಿವ, ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ.
ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಹತ್ತಿರ ಸುಳಿಯದವರು, ಸೋಲುಂಡರೂ ಮಂತ್ರಿಯಾದವರು ನೀತಿ ಪಾಠ ಹೇಳಲು ಬರುತ್ತಿದ್ದಾರೆ. ಅಂಥವರಿಂದ ನೀತಿಪಾಠ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ ಎಂದು ಹೇಳುವ ಮೂಲಕ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಸಚಿವ ಲಕ್ಷ್ಮಣ ಸವದಿ ವಿರುದ್ಧ ಮತ್ತೆ ಹರಿ ಹಾಯ್ದಿದ್ದಾರೆ.