ಪ್ರಮುಖ ಸುದ್ದಿ
ಹೊನ್ನಾಳಿ ಶಾಸಕನ ಹೊಣೆಗೇಡಿತನ !
ದಾವಣಗೆರೆ : ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲೂ ನೆರೆಹಾವಳಿಯಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಈ ವೇಳೆ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸಾಂತ್ವನ ಹೇಳಿ ಪರಿಹಾರ ಕಾರ್ಯ ಕೈಗೊಳ್ಳಲು ಶಾಸಕ ರೇಣುಕಾಚಾರ್ಯ ವಿವಿಧ ಗ್ರಾಮಗಳಿಗೆ ತೆರಳಿದ್ದರು. ವಿವಿದೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಬೇಲಿಮಲ್ಲೂರು ಗ್ರಾಮದ ಸಮೀಪ ತುಂಗಭದ್ರಾ ನದಿ ತೀರದ ಬಳಿ ಆಗಮಿಸಿದಾಗ ರೇಣುಕಾಚಾರ್ಯ ಅವರಿಗೆ ಅದೇನನ್ನಿಸಿತೋ ಗೊತ್ತಿಲ್ಲ. ಮೊಳಕಾಲು ಮಟ್ಟದ ನೀರಿನಲ್ಲಿ ತೆಪ್ಪಕ್ಕೆ ಹರಿಗೋಲು ಹಾಕಿ ಫೋಸ್ ನೀಡಿದ್ದಾರೆ. ಕಡಿಮೆ ನೀರು ಇರುವ ಸ್ಥಳ, ತೆಪ್ಪದ ಪಕ್ಕದಲ್ಲಿಬ್ಬರು ತೆಪ್ಪ ಚಲಿಸದಂತೆ ನೋಡಿಕೊಂಡಿದ್ದು ವಿಡಿಯೋ ರೆಕಾರ್ಡ್ ಆಗಿದ್ದು ರೇಣುಕಾಚಾರ್ಯ ಹುರಿಗೋಲು ಹಾಕುವ ವಿಡಿಯೋ ವೈರಲ್ ಆಗಿದೆ. ಆ ಮೂಲಕ ಪ್ರವಾಹ ಪೀಡಿತರಿಗೆ ನೆರವು ನೀಡಲು ತೆರಳಿದ್ದ ಶಾಸಕ ಫೋಸ್ ನೀಡುವ ಮೂಲಕ ತಮ್ಮ ಹೊಣೆ ಮರೆತು ಹೊಣೆಗೇಡಿತನ ಪ್ರದರ್ಶಿಸಿದ್ದಾರೆ ಎಂದು ಸಾಮಾಜಿಕಜಾಲತಾಣದಲ್ಲಿ ಅನೇಕರು ಟೀಕಿಸಿದ್ದಾರೆ.