58 ಜನರಿಗೆ ರೂಪಾಂತರ ವೈರಸ್ ಸೋಂಕುಃ ಹುಷಾರ್
58 ಜನರಿಗೆ ರೂಪಾಂತರ ವೈರಸ್ ಸೋಂಕುಃ ಹುಷಾರ್
ವಿವಿ ಡೆಸ್ಕ್ಃ ದೇಶದಲ್ಲಿ ಇಂದು 58 ರೂಪಾಂತರ ಕೊರಾನಾ ಸೋಂಕಿತರು ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇಂದು ರೂಪಾಂತರ ಭೂತದ ಭಯ ಜಾಸ್ತಿಯಾಗಿದೆ. ಇಂದು ಬೆಂಗಳೂರಿನಲ್ಲಿಯು ರೂಪಾಂತರಗೊಂಡ ವೈರಸ್ ಗೆ ತಗಲಾಕೊಂಡವರು ಮಾಹಿತಿ ದೊರೆತಲಿದೆ ಎಂದು ಹೇಳಲಾಗುತ್ತಿದೆ.
ಇಂದು ಪುಣೆ ಲ್ಯಾಬ್ ನಿಂದ ಪರೀಕ್ಷೆ ವರದಿ ಮೇಲೆ ಇಂದು ಎಲ್ಲರ ಕಣ್ಣಿದ್ದು, ಸದ್ಯ 20 ಜನ ಬ್ರಿಟನ್ ನಿಂದ ಬಂದವರಲ್ಲಿ ರೂಪಾಂತರ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಪುಣೆ ಲ್ಯಾಬ್ ನಿಂದ ಮಾಹಿತಿ ಬಂದಿದೆ.
ಲ್ಯಾಬ್ ಸಮರ್ಪಕ ಮಾಹಿತಿಯನ್ನು ಕೇಂದ್ರ ಆರೋಗ್ಯ ಇಲಾಖೆಗೆ ನೀಡಲಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಮಾಧ್ಯಮಕ್ಕೆ ದೃಢಿಕೃತ ಮಾಹಿತಿ ನೀಡಲಿದೆ. ಇದರಲ್ಲಿ ಬೆಂಗಳೂರಿಗೆ ಬಂದ ಬ್ರಿಟನ್ ನವರ ಪಾಲೆಷ್ಟು ಎಂಬುದು ಜನರ ಆತಂಕ ಭಯ ಹುಟ್ಟಿಸುತ್ತಿದೆ. ಹೀಗಾಗಿ ರೂಪಾಂತರ ಕೊರೊನಾ ಆರ್ಭಟ ಶುರುವಾಗಿದ್ದು,
ಇದರ ತೀವ್ರತೆ ಹೆಚ್ವಾಗಿದ್ದು, ಸದ್ಯ ಬೆರಳಣಿಕೆ ಯಷ್ಟು ಹಬ್ಬಿರುವಂತೆ ಕಂಡು ಬರುವ ಈ ಹೊಸ ಪ್ರಭೇದ ತಳಿ ಕೊರೊನಾ ಬ್ರಿಟನ್ ನಲ್ಲಿ ದಿನಕ್ಕೆ 20 ಸಾವಿರದಷ್ಟು ಜನರಿಗೆ ಸೋಂಕು ಹರಡುತ್ತಿರುವದು ಮಾಹಿತಿ ಬಂದಿದೆ.
ಹೀವಾಗಿ ಭಾರತ ತೀವ್ರ ಕಳವಳಕ್ಕೆ ಬಿದ್ದಿದ್ದು, ಈ ಹೊಸ ತಳಿ ಕೊರೊನಾ ತಡೆಗೆ ಎಲ್ಲರೂ ಮುನ್ನೆಚ್ಚರಿಕೆವಹಿಸಬೇಕು.
ಇನ್ನೂ ದೂರವಿದೆ ಎಂದು ನಿರ್ಲಕ್ಷವಹಿಸಿದ್ದಲ್ಲಿ ಕೊರೊನಾ ಹೇಗೆ ಮನೆ ಬಾಗಿಲಿಗೆ ಮನೆಯೊಳಗೆ ಬಂದಿತ್ತೋ ಹಾಗೇ ಹಾಗಲಿದೆ ಎಂಬುದು ಮರೆಯಬೇಡಿ.