ಪ್ರಮುಖ ಸುದ್ದಿ

ಅವನು ಪತ್ನಿಯ ಕೊಂದ ಕಾರಣ ಕೇಳಿದರೆ ಶಾಕ್!

‘ಸಾಲ ಯಾಕ ಮಾಡತಿ’ ಅಂದ ಪತ್ನಿಯ ಹತ್ಯೆ ಮಾಡಿದ ಪಾಪಿ!

ಕಲಬುರಗಿ: ಪತಿ ಸಾಲದ ಸುಳಿಯಲ್ಲಿ ಸಿಲುಕಿದ್ದನ್ನು ಕಂಡು ಪತ್ನಿ ಆದವಳು ಆತಂಕಗೊಳ್ಳುವುದು ಸಹಜ. ಆತಂಕದಿಂದ ಸಾಲದ ಬಗ್ಗೆ ತಿಳಿದುಕೊಳ್ಳಲು ಮುಂದಾಗುವುದೂ ಸಹ ಸಹಜ. ಅದು ಪತಿ ಮತ್ತು ತನ್ನ ಕುಟುಂಬದ ಮೇಲಿರುವ ಪ್ರೀತಿ, ಕಾಳಜಿಯೇ ಹೊರತು ಸಾಲದ ಬಗ್ಗೆ ಪ್ರಶ್ನಿಸಿ ಮಾನಸಿಕ ಹಿಂಸೆ ನೀಡುವ ಉದ್ದೇಶ ಅಲ್ಲ. ಆದರೆ, ಇದನ್ನರಿಯದ ಅವಿವೇಕಿ ಪತಿರಾಯನೊಬ್ಬ ‘ಸಾಲ ಯಾಕ ಮಾಡತಿ’ ಅಂತ ಪ್ರಶ್ನಿಸಿದ ಮಡದಿ ಮೇಲೆ ಕೋಪ ತಾಪ ತೋರಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಚಿತ್ತಾಪುರ ತಾಲೂಕಿನ ಶಹಾಬಾದ ಪಟ್ಟಣದಲ್ಲಿ ದುರ್ಘಟನೆ ನಡೆದಿದೆ. ಶಿವಮ್ಮ ಎಂಬ ಮಹಿಳೆ ಮೃತ ದುರ್ದೈವಿ ಪತ್ನಿ. ಪತಿ ನಾಗಪ್ಪ ನಿನ್ನೆ ರಾತ್ರಿ ವೇಳೆ ಪತ್ನಿಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತಲೆಗೆ ಪೆಟ್ಟು ಬಿದ್ದಿದ್ದು ತೀವ್ರ ರಕ್ತಸ್ರಾವವಾಗಿ ಶಿವಮ್ಮ ಕೊನೆಯುಸಿರೆಳೆದಿದ್ದಾಳೆ. ಶಿವಮ್ಮ ಸಾವಿನ ನಂತರ ಆರೋಪಿ ನಾಗಪ್ಪ ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button