ಪ್ರಮುಖ ಸುದ್ದಿ
ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತ್ಯೇಕ ಧ್ವಜಾರೋಹಣ!?
ಬೆಳಗಾವಿ : ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಗ್ರಹಿಸಿ ನಗರದ ಸುವರ್ಣ ಸೌಧದ ಎದುರು ನಾಳೆ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಿಡಸೋಶಿ ಮಠದ ಪಂಚಮಲಿಂಗೇಶ್ವರ ಶ್ರೀ, ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಶ್ರೀ, ಹುಕ್ಕೇರಿ ಮಠದ ಚಂದ್ರಶೇಖರ ಶ್ರೀಗಳು ಸೇರಿದಂತೆ ನೂರಕ್ಕೂ ಹೆಚ್ಚು ಸ್ವಾಮೀಜಿಗಳು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೋರಾಟ ಸಮಿತಿಯ ಅದ್ಯಕ್ಷ ಭೀಮಪ್ಪ ಗಡಾದ್ ಹೇಳಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿ, ಸುವರ್ಣ ಸೌಧಕ್ಕೆ ಕಾಯಕಲ್ಪಕ್ಕೆ ಒತ್ತಾಯಿಸಿ ದರಣಿ ನಡೆಸುತ್ತೇವೆ. ಇದೇ ವೇಳೆ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತ್ಯೇಕ ಧ್ವಜಾರೋಹಣ ನೆರವೇರಿಸುವ ಚಿಂತನೆ ನಡೆದಿದೆ. ಕೇಸರಿ, ಹಳದಿ ಮತ್ತು ಹಸಿರು ಬಣ್ಣಗಳ ಧ್ವಜದ ನಡುವೆ ಕರ್ನಾಟಕದ ಲಾಂಛನವಿರುತ್ತದೆ ಎಂದು ಹೋರಾಟ ಸಮಿತಿಯ ಅದ್ಯಕ್ಷ ಭೀಮಪ್ಪ ಗಡಾದ್ ತಿಳಿಸಿದ್ದಾರೆ.