ಶಹಾಪುರಃ ಕಾಂತರಾಜ್ ಆಯೋಗ ವರದಿ ಬಿಡುಗಡೆಗೆ ಎಸ್ಡಿಪಿಐ ಆಗ್ರಹ
ಮುಸ್ಲಿಂರಿಗೆ ಶೇ.8 ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಧರಣಿ
ಕಾಂತರಾಜ್ ಆಯೋಗ ವರದಿ ಬಿಡುಗಡೆಗೆ ಎಸ್ಡಿಪಿಐ ಆಗ್ರಹ
ಮುಸ್ಲಿಂರಿಗೆ ಶೇ.8 ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಧರಣಿ
yadgiri, ಶಹಾಪುರಃ ನಗರದ ತಹಸೀಲ್ ಕಚೇರಿ ಎದುರು ಎಸ್ಡಿಪಿಐ ಕಾರ್ಯಕರ್ತರು ಗುರುವಾರ ಕಾಂತರಾಜ್ ಆಯೋಗ ವರದಿ ಬಿಡುಗಡೆಗೆ ಆಗ್ರಹಿಸಿ ಮತ್ತು ಮುಸ್ಲಿಂರಿಗೆ ಶೇ.8 ರಷ್ಟು ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರರ ಮೂಲಕ ಸಿಎಂ ಸಿದ್ರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಮಹ್ಮದಸಾ ಢಾಲಾಯತ್ ಮಾತನಾಡಿ, ಹಿಂದುಳಿದ ವರ್ಗಗಳ ಏಳ್ಗೆಗಾಗಿ ಕಾಂತರಾಜ್ ಆಯೋಗ ವರದಿ ಸರ್ಕಾರ ಕೂಡಲೇ ಸ್ವೀಕರಿಸಿ ವರದಿ ಬಿಡುಗಡೆಗೊಳಿಸಬೇಕು. ಅಲ್ಲದೆ ಬೊಮ್ಮಾಯ ಸಿಎಂ ಇದ್ದಾಗ ಮುಸ್ಲಿಂರಿಗೆ 2 ಬಿ ಕೆಟಗರಿಯಡಿ ನೀಡಬೇಕಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಪಡಿಸಲಾಗಿದೆ.
ಇದೀಗ ಸಿದ್ರಾಮಯ್ಯನವರ ಸರ್ಕಾರ ಆಡಳಿತದಲ್ಲಿದ್ದು, ಈ ಕೂಡಲೇ ಹಿಂದಿನ ಸರ್ಕಾರ ರದ್ದು ಪಡಿಸಿದ ಆದೇಶವನ್ನು ವಾಪಸ್ ಪಡೆಯಬೇಕು. ಮತ್ತು ರಾಜ್ಯದಲ್ಲಿ ಶೇ.18 ರಷ್ಟಿದ್ದ ಮುಸ್ಲಿಂರಿಗೆ 2ಬಿ ಮೀಸಲಾತಿಯ ಪ್ರಮಾಣವನ್ನು ಶೇ.8 ಕ್ಕೆ ಏರಿಸಬೇಕೆಂದು ಒತ್ತಾಯಿಸಿದರು.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಸಿನವರು ನೀಡಿದ ಭರವಸೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಧರಣಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಜಾನಿ, ಬಂದೇನವಾಜ್, ಮುನಿರುದ್ದೀನ್, ಅಬರಾರ್, ಬಿಲಾಲ್ ಖುರೇಶಿ, ಆಸೀಫ್ ರಾಜೆ, ಶಕೀಲ್ ಜಮಾದಾರ್, ದಲಿತ ಮುಖಂಡರಾದ ಶಿವಪುತ್ರ ಜವಳಿ, ಶರಣು ದೋರನಹಳ್ಳಿ, ರಾಶೀದ್ ಪೀರಜಿ, ಆಬಿದ್, ಇಮ್ರಾನ್ ಬಾಬಾ, ಸಯ್ಯದ್ ಇಮ್ರಾನ್, ಶೌಕತ್ ಅಲಿ, ಮಹಿಬೂಬ್ ಒಂಟಿ, ಅಶ್ಫಾಕ್ ಸಗರ, ರಫೀಕ್ ಕುರಕುಂದಾ, ಚಾಂದ್, ಬಾಶುಮಿಯಾ, ಆಸೀಫ್, ಮಹಿಬೂಬ್, ಬಾಬಾ ರಸ್ತಾಪುರ ಅಮೀರ್ ಇತರರಿದ್ದರು.
——————