ದರ್ಶನಾಪುರದಲ್ಲಿ ಯುವಕನ ಸಂಶಯಾಸ್ಪದ ಸಾವುಃ ಪ್ರಕರಣ ದಾಖಲು
ಸಂಶಯಾಸ್ಪದ ಸಾವುಃ ಪಾಲಕರಿಂದ ಗೋಗಿ ಠಾಣೆಗೆ ದೂರು
ಶಹಾಪುರಃ ಗ್ರಾಮದ ವಸತಿ ನಿಲಯದ ಮೇಲ್ಛಾವಣಿ ಮೇಲೆ ಮಲಗಿರುತ್ತಿದ್ದ ಯುವಕ ಅದೇ ವಸತಿ ನಿಲಯದ ಹಿಂಭಾಗದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಜೋತು ಬಿದ್ದ ಯುವಕನ ಶವ ಕಂಡು ಪಾಲಕರು ದಂಗಾಗಿದ್ದು, ಇದು ಆತ್ಮಹತ್ಯೆ ಅಲ್ಲ ಸಹಜ ಸಾವು ಅಲ್ಲ ಈ ಇದರ ಹಿಂದೆ ಕಾಣದ ಕೈಗಳಿದ್ದು, ಇದು ಕೊಲೆ ಆಗಿದೆ ಎಂದು ಮೃತ ಯುವಕನ ತಂದೆ ಗುರುವಾರ ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಮೃತ ಯುವಕನ ಹೆಸರು ಮಂಜುನಾಥ (18) ಈತ ವಿಜಯಪುರದಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ, ಇತ್ತೀಚೆಗೆ ಕೋವಿಡ್ ಹಿನ್ನೆಲೆ ಸ್ವಗ್ರಾಮ ದರ್ಶನಾಪುರಕ್ಕೆ ಆಗಮಿಸಿ ಮನೆಯಲ್ಲಿಯೇ ಇದ್ದ, ಆದರೆ ನಿತ್ಯ ಗೆಳೆಯರ ಜೊತೆ ಗ್ರಾಮದ ವಸತಿ ನಿಲಯದ ಕಟ್ಟಡ ಮೇಲೊಂದರಲ್ಲಿ ಮಲಗುತ್ತಿದ್ದರು.
ಬುಧವಾರವು ತನ್ನ ಗೆಳೆಯನೊಬ್ಬನ ಜೊತೆ ವಸತಿ ನಿಲಯದ ಕಟ್ಟಡದ ಮೇಲೆ ಮಲಗು ಹೋಗಿದ್ದಾರೆ. ಎಂದಿನಂತೆ ಗುರುವಾರ ಮಗ ಹಾಸ್ಟೇಲ್ ಮೇಲೆ ಮಲಗಿದ್ದಾನೆ ಎಂದು ಕೊಂಡು ಪಾಲಕರಿಗೆ ದಿಗ್ಭ್ರಾಂತವಾಗಿದೆ. ಹಾಸ್ಟೇಲ್ ಹಿಂಬದಿ ಮರವೊಂದಕ್ಕೆ ನೇಣು ಬಿಗಿದು ಕೊಂಡು ಶವ ಜೋತಾಡುವದನ್ನು ಕಂಡು ದಂಗಾಗಿದ್ದು, ಮೃತ ಮಂಜುನಾಥ ಪಾಲಕರ ಸಂಬಂಧಿಕರ ರೋಧಣ ಮುಗಿಲು ಮುಟ್ಟಿದೆ.
ಮೃತ ಮಂಜುನಾಥನ ತಂದೆ ಇದು ಸಹಜ ಸಾವಲ್ಲ ಆತ್ಮಹತ್ಯೆಯೂ ಅಲ್ಲ ಸಂಶಯಾಸ್ಪದವಾಗಿದ್ದು, ಪೊಲೀಸರು ತನಿಖೆ ನಡೆಸುವ ಮೂಲಕ ತನ್ನ ಮಗನ ನೇಣೀಗೆ ಶರಣಾಗಿರುವ ಕುರಿತು ಸತ್ಯಾಂಶ ಹೊರಬರಬೇಕು. ಇದು ಕೊಲೆ ಆಗಿದೆ ಎಂದು ಶಂಕೆ ವ್ಯಕ್ತಿಪಡಿಸಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದೇವೆ ಎಂದು ಗೋಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.
———————