ಜನಸಂಖ್ಯಾ ಸ್ಪೋಟ ಅಂತರ ಜಲ ಕುಸಿತ-ಡಾ.ಎ.ಸುಬ್ಬರಾವ್
ಶಹಾಪುರ ಅಂತರಜಲ ಗುಣಮಟ್ಟ ತೃಪ್ತಿಕರ
ಹೆಚ್ಚಿನಜನ ಸಾಂದ್ರತೆಯಿಂದ ದೇಶದಲ್ಲಿ ಜಲಕ್ಷಾಮ-ಡಾ. ಸುಬ್ಬರಾವ್
ಯಾದಗಿರಿ, ಶಹಾಪುರಃ ಈ ಭಾಗದಲ್ಲಿ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯ ವಿರುವದರಿಂದ ಹೊಲಗದ್ದೆಗಳಿಗೆ ಕಾಲುವೆ ಮೂಲಕ ನೀರು ಹರಿದು ಬರುತ್ತಿದ್ದು, ಈ ಭಾಗದಲ್ಲಿ ಅಂತರ ಜಲಧಾರೆ ತೃಪ್ತಿಕರವಾಗಿದೆ. ಸಕಲರು ನೀರನ್ನು ಹಿತಮಿತದೊಳಗೆ ಸದ್ಭಳಕೆ ಮಾಡಿಕೊಂಡಲ್ಲಿ ಜಲಕ್ಷಾಮವಿಲ್ಲ ಎಂದು ಪ್ರಾದೇಶಿಕ ಅಂತರ ಜಲಮಂಡಳಿಯ ಬೆಂಗಳೂರ ನಿರ್ದೇಶಕ ಡಾ.ಎ. ಸುಬ್ಬರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭೀಮರಾಯನ ಗುಡಿ ಕೃಷಿ ವಿಶ್ವ ಮಹಾವಿದ್ಯಾಲಯದಲ್ಲಿ ಕೇಂದ್ರಿಯ ಅಂತರಜಲ ಮಂಡಳಿ ಮತ್ತು ಜಲ ಸಂಪನ್ಮೂಲ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾದ ಜಲಧರ ನಕ್ಷೆಗಳು ಮತ್ತು ಅಂತರ್ಜಲ ನಿರ್ವಹಣೆ ಯೋಜನೆಗಳ ಮೇಲಿನ ಸಾರ್ವಜನಿಕ ಸಂವಹನ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಜನ ಸಂಖ್ಯಾಸ್ಪೋಟ ಹೆಚುತ್ತಿದ್ದು, ಅಂತರ್ಜಲ ಕುಸಿಯುತ್ತಿದೆ. ಈ ದಿಸೆಯಲ್ಲಿ ನೀರನ ಸದ್ಬಳಕೆ ಮಿತವಾಗರಬೇಕು. ಈ ವ್ಯವಸ್ಥೆಯಿಂದ ನೀರಿನ ಬವಣೆಗಳಿಂದ ಮುಕ್ತರಾಗಲು ಸಾಧ್ಯವೆಂದು ತಿಳಿಸಿದರು. ಇಲ್ಲವಾದಲ್ಲಿ ಮುಂದೆ ಅಗಾಧವಾದ ನರಕಯಾತನೆ ಸಮವಾದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಕೆ.ಟಕ್ಕಳಕಿ, ಕೃಷಿ ಸಹಾಯಕ ನಿರ್ದೇಶಕ ದಾನಪ್ಪ ಕತ್ನಳ್ಳಿ, ಜಿಲ್ಲಾ ಭೂ ವಿಜ್ಷಾನಿಗಳಾದ ಎಸ್.ಎಮ್.ಕೃಷ್ಣ, ಕೃಷಿ ವಿವಿಯ ಲೀಡರ್ ಡಾ.ಆರ್.ಪಿ. ಜಯಪ್ರಕಾಶ, ನಿವೃತ್ತ ಅಧಿಕಾರಿ ಭೀಮರಡ್ಡಿ ಬೈರಡ್ಡಿ ಸೇರಿದಂತೆ ಇತರರು ¨ಉಪಸ್ಥಿತರಿದ್ದರು.
ಮಧು ಬಾವಿಮನಿ ಪ್ರಾರ್ಥಿಸಿದರು. ಕೇಂದ್ರಿಯ ಅಂತರ್ಜಲ ಮಂಡಳಿಯ ವಿಜ್ಞಾನಿ ಡಾ. ಎಂ.ಫಾರುಖ್ ಸ್ವಾಗತಿಸಿದರು.
ವಿಜ್ಞಾನಿ ಡಾ.ಅನಂತ ಅರಸು ವಂದಿಸಿದರು. ಕಾರ್ಯಾಗಾರದಲ್ಲಿ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಮತ್ತು ಅಧ್ಯಕ್ಷರು, ಸದಸ್ಯರು ಇತರೆ ಇಲಾಖೆಯ ಅಧಿಕಾರಿ ಸಿಬ್ಬಂದಿ ಭಾಗವಹಿಸಿದ್ದರು.