Homeಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ITBP Recruitment 2024: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (ITBP Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ITBP Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)

ವೇತನ ಶ್ರೇಣಿ: 25,500 ರೂ. ರಿಂದ 1,12,400 ರೂ.

ಹುದ್ದೆಗಳ ಸಂಖ್ಯೆ: 29

ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:

ಸಬ್ ಇನ್ಸ್‌ಪೆಕ್ಟರ್ (Staff Nurse) – 10

ಸಹಾಯಕ ಸಬ್ ಇನ್ಸ್‌ಪೆಕ್ಟರ್ (Pharmacist) – 05

ಹೆಡ್ ಕಾನ್ಸ್ಟೇಬಲ್ (Midwife) – 14

ಶೈಕ್ಷಣಿಕ ಅರ್ಹತೆ:

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ಡಿಪ್ಲೊಮಾ, GNM, ANM ಪೂರ್ಣಗೊಳಿಸಿರಬೇಕು.

ವೇತನ ಶ್ರೇಣಿ:

ಸಬ್ ಇನ್ಸ್‌ಪೆಕ್ಟರ್ (Staff Nurse) – 35,400 ರೂ. ರಿಂದ 1,12,400 ರೂ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ (Pharmacist) – 29,200 ರೂ. ರಿಂದ 92,300 ರೂ.

ಹೆಡ್ ಕಾನ್ಸ್ಟೇಬಲ್ (Midwife) – 25,500 ರೂ. ರಿಂದ 81,100 ರೂ.

ವಯೋಮಿತಿ:

ITBP ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:

SC, ST, ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.

ಸಬ್ ಇನ್ಸ್‌ಪೆಕ್ಟರ್ (Staff Nurse) ಹುದ್ದೆ:

UR, OBC, EWS ಅಭ್ಯರ್ಥಿಗಳಿಗೆ: 200 ರೂ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ (Pharmacist) ಹುದ್ದೆ:

UR, OBC, EWS ಅಭ್ಯರ್ಥಿಗಳಿಗೆ: 100 ರೂ.

ಹೆಡ್ ಕಾನ್ಸ್ಟೇಬಲ್ (Midwife) ಹುದ್ದೆ:

ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ.ಪಾವತಿಸುವ ವಿಧಾನ: ಆನ್‌ಲೈನ್

ITBP Recruitment 2024 ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-06-2024

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 28-07-2024

ಅಧಿಕೃತ ವೆಬ್ ಸೈಟ್: recruitment.itbpolice.nic.in

Related Articles

Leave a Reply

Your email address will not be published. Required fields are marked *

Back to top button