ಕಾವ್ಯ
ತಂದೆ ತಾಯಿ ಕೊಟ್ಟ ಮನೆಗೆ ನೀ ಹೋಗ..ಭಜನಾ ಪದ
ಭಜನಾ ಪದ
ಹೆಣ್ಣೊಂದು ಬಾಳಿನ ಕಣ್ಣು
ಮರೆತರೆ ನೀ ಆಗುತಿದಿ ಮಣ್ಣು
ಸತ್ಯದಿಂದಲೇ ನಡಿರೇ ತಂಗೆವ್ವ,
ಹೊತ್ತ ಮುಳುಗೀತು ಕಂಡಿರೆ ತಾಯವ್ವ.
ಶ್ವಾನಗಳಂತೆ ತಿರುಗಲು ಬೇಡ
ಮಾನ ಹೋಗುತೈತಿ ನೋಡ
ಮುತ್ತಿನಂತ ಮಾನವ ಜನ್ಮ
ಬೆಳಗುತಿರು ತಾಯಮ್ಮ.
ಸತ್ಯ ಶರಣ,ಶರಣಿಯರಿಗೆ ತಲೆ ಬಾಗ
ತವರಿನ ತೊಟ್ಟಿಲು ತೂಗ
ತಂದೆ ತಾಯಿ ಕೊಟ್ಟ ಮನೆಗೆ
ನೀತಿಯಿಂದ ನೀ ಹೋಗ
ಭಕ್ತಿಯಿಂದ ಭಜನೆಯ ಕೇಳ
ಮುಕ್ತಿ ಕೊಡುವನು ದೇವರು ನಿನಗ
ನಿತ್ಯ ಗುರು, ಹಿರಿಯರ ನಮಿಸ
ಸಂಕಟ ದೂರಾಗಿ ನನಸಾಗುವದ ಕನಸ
ಗುರು ಸಿದ್ಧಾರೂಢರ ನೆನಸ
ನಿನ ಬಾಳೆಲ್ಲ ಬೆಳಕ
ಶಾಂತು ಬರೆದ ಪದವ ತಿಳಕ
–ಶಾಂತಕುಮಾರ ಬಿರೆದಾರ ಉಮರದೊಡ್ಡಿ.
ಮೊ.9900171190