ಅರ್ಧ ಪಾಲಿನ ಗುಟ್ಟು, ಏನದು ಛಡಿ ಏಟು ಬೆಸ್ತನ ಜಾಣ್ಮೆ
ಅರ್ಧ ಪಾಲಿನ ಗುಟ್ಟು
ಭಾಗ್ಯನಗರದ ಮಹಾರಾಜನ 69 ನೇ ಹುಟ್ಟುಹಬ್ಬಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಮೀನಿನ ವಿಶೇಷ ಅಡುಗೆಗೆಂದೇ ಎಲ್ಲರೂ ತಯಾರಾದರು. ಮುಂಚಿನ ದಿನ ಬಿರುಗಾಳಿ ಇದ್ದುದರಿಂದ ಯಾರೂ ಸಮುದ್ರಕ್ಕೆ ಇಳಿದಿರಲಿಲ್ಲ. ಆದರೆ ರಾಜನಿಗೆ ಮೀನೇ ಬೇಕೆಂದಾಯಿತು.
ಅಷ್ಟರಲ್ಲೇ ಬೆಸ್ತನೊಬ್ಬ ಹತ್ತಡಿ ದೊಡ್ಡ ಮೀನಿನೊಂದಿಗೆ ಅಲ್ಲಿಗೆ ಬಂದಿದ್ದ. ಆ ಮೀನು ತಂದುದಕ್ಕೆ ರಾಜ ಖುಷಿಯಿಂದ ಬಹುಮಾನ ಕೊಡಲು ಮುಂದಾದಾಗ ಬೆಸ್ತನು “ಬೇರೆ ಏನು ಬೇಡ. 50 ಛಡಿ ಏಟುಗಳು ಇರಲಿ” ಎಂದನು.
ರಾಜನು ಅಂಗರಕ್ಷಕನೊಡನೆ ಅತಿ ಮೆಲ್ಲನೆ ಏಟು ಕೊಡುವಂತೆ ಹೇಳಿದನು. 25 ಏಟು ಆಗುತ್ತಲೇ ಆತ ನಿಲ್ಲಿಸು ಎಂದನು. ನನ್ನ ಕೆಲಸದಲ್ಲಿ ಮೀನುಗಾರನೊಬ್ಬನಿದ್ದಾನೆ. ಅವನಿಗೆ ಬಾಕಿ 25 ಛಡಿ ಏಟು ಕೊಡು ಎಂದನು.
ಬೆಸ್ತನು ಅರಮನೆಯ ದ್ವಾರಪಾಲಕನನ್ನು ಎಳಕೊಂಡು ಬಂದು, “ಒಳಗೆ ಬಿಟ್ಟರೆ ನಿನ್ನ ಸಂಪಾದನೆಯಲ್ಲಿ ಅರ್ಧ ಪಾಲು ನನಗೆ ಕೊಡಬೇಕು” ಎಂದಿದ್ದನು. ಅದರ ಪ್ರಕಾರ 25 ಛಡಿ ಏಟು ಈತನಿಗೆ…
ರಾಜನಿಗೆ ಬೆಸ್ತನ ಜಾಣ್ಮಗೆ ಖುಷಿಯಾಯಿತು. “ಇನ್ನು ಮೇಲೆ ನನ್ನ ಸಭೆಯಲ್ಲಿ ನೀನೇ ವಿದೂಷಕನಾಗಿರು” ಎಂದು ಅವನನ್ನು ನೇಮಿಸಿಕೊಂಡು 25 ವರಹಗಳ ಇನಾಮೆಯನ್ನು ಅವನಿಗೆ ನೀಡಿದನು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882