ಜನಾರ್ಧನ ರಡ್ಡಿ ಕ್ಷೇತ್ರ ಆಯ್ಕೆ..? ಯಾವ ಕ್ಷೇತ್ರ ಕುರಿತು ಗುಡ್ ನಿವ್ಸ್ ಅಂದ್ರು ರಡ್ಡಿಗಾರು.?
ಜನಾರ್ಧನ ರಡ್ಡಿ ಸಾರ್ವಜನಿಕ ಸೇವೆಗೆ ಸಿದ್ಧ
ಜನಾರ್ಧನ ರಡ್ಡಿ ಕ್ಷೇತ್ರ ಆಯ್ಕೆ..? ಯಾವ ಕ್ಷೇತ್ರ ಕುರಿತು ಗುಡ್ ನಿವ್ಸ್ ಅಂದ್ರು ರಡ್ಡಿಗಾರು.?
ಚುನಾವಣೆ ಸಮೀಪಿಸಿದಂತೆ ಆಕ್ಟಿವ್ ಆದ ಜನಾರ್ಧನ ರಡ್ಡಿ
ವಿವಿ ಡೆಸ್ಕ್ಃ ಮಾಜಿ ಸಚಿವ, ಗಣಿಧಣಿಗಳೆಂದು ಖ್ಯಾತರಾಗಿದ್ದ ಜನಾರ್ಧನ ರಡ್ಡಿ ಅವರು ವಿಧಾನಸಭೆ ಚುನಾವಣೆ ಹತ್ತೀರವಾದಂತೆ ಸ್ಪರ್ಧೆಗಿಳಿಯಲು ವಿಧಾನಸಭಾ ಕ್ಷೇತ್ರವೊಂದರ ಮೇಲೆ ಕಣ್ಣಿಟ್ಟು ಆಕ್ಟಿವ್ ಆಗಿದ್ದಾರೆ ಎನ್ನಲಾಗಿದೆ.
ಹೌದು ಹನುಮ ಮಾಲಾ ಧರಿಸಿದ ಜನಾರ್ಧನ ರಡ್ಡಿ ಅವರು ಮಾಲಾ ವಿಸರ್ಜನಾ ಕಾರ್ಯಕ್ರಮ ಹಿನ್ನೆಲೆ ಗಂಗಾವತಿ ಯಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಹನುಮಾ ಮಾಲಾಧಾರಿ ಜನಾರ್ಧನರಡ್ಡಿ ಅವರು ಭಾಗವಹಿಸಿದ್ದರು.
ಜೊತೆಗೆ ಗಂಗಾವತಿ ಕ್ಷೇತ್ರದ ಶಾಸಕ ಮುನವಳ್ಳಿ ಅವರು ಇದ್ದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಹೆ ಮಾತನಾಡಿದ. ಅವರು, ಇಷ್ಟರಲ್ಲಿಯೇ ಗುಡ್ ನಿವ್ಸ್ ತಿಳಿಸಲಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ಮುಂದುವರೆಯಲಿದ್ದೇನೆ. ನಾನು ಹುಟ್ಟಿ ಬೆಳೆದಿದ್ದು, ಬಳ್ಳಾರಿ ಹೀಗಾಗಿ ಈ ನೆಲದ ಮೇಲೆ ಅಪಾರ ಪ್ರೀತಿ, ಗೌರವ ವಿದೆ ಎಂದಿದ್ದಾರೆ.
ಅವರ ಯೋಚನಾ ಲಹರಿ ಮಾತಿನಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರು ಗಂಗಾವತಿ ಹನುಮಾ ಮಾಲಾ ಧರಿಸಿ ವ್ರತ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಗಂಗಾವತಿಯಲ್ಲಿ ನಡೆಯುತ್ತಿರುವ ಸಂಕೀರ್ತನ ಯಾತ್ರೆಯಲ್ಲೂ ಭಾಗವಹಿಸಿದ್ದಾರೆ.
ಮಾಧ್ಯಮದ ಮುಂದೆ ಶೀಘ್ರದಲ್ಲಿ ಗುಡ್ ನಿವ್ಸ್ ನೀಡುತ್ತೇನೆ ಎಂದು ಹೇಳುವ ಮೂಲಕ ಎಲ್ಲಾ ರಾಜಕಾರಣಿಗಳ ಹುಬ್ಬೇರುವಂತೆ ಮಾಡಿದ್ದಾರೆ ಎನ್ನಬಹುದು.