ಕಾವ್ಯ
ಅಂಗಳದಲ್ಲಿ ಅರಳಿದ ಚೆಂಗುಲಾಬಿಯೇ..ನೀನೆಲ್ಲೋ ನಾನಲ್ಲೇ..
ನೀನೆಲ್ಲೋ ನಾನಲ್ಲೇ….
ಸಂಜೆಯ ಹಾಡಿಗೆ ಹಾಡಾದವಳೆ
ಪೌರ್ಣಿಮೆಯ ಹಾಲಲಿ ಮಿಂದವಳೆ
ಸುಳಿದುಸೂಸುವ ಗಾಳಿಯಲಿ ಗಂಧವಾದವಳೆ
ಅಂಗಳದಿ ಅರಳಿದ ಚೆಲುವ ಚೆಂಗುಲಾಬಿಯವಳೆ
ನಿನ್ನ ಮೈಮಾಟಕೆ ಸೋತುಬಂದೆ
ಕಪ್ಪುಕಂಗಳ ನೋಟಕೆ ಒಲಿದು ಬಂದೆ
ನವಿರಾದ ಮುಂಗುರಳು ಮೋಹಕತೆಗೆ
ಎಡಗೆನ್ನೆಯ ಗುಳಿಯ ಸಂಭ್ರಮಕೆ ಬೆರಗಾದೆ
ಅದೇನು ಮಾದಕತೆ ಅದೇನು ತನ್ಮಯತೆ
ಒಲವ ಮಲ್ಲಿಗೆ ಕೊರಳತುಂಬ ತುಂಬಲೆ..
ಹೇಳೆ ಸಖಿ ನಾಚಿಕೆಯೇಕೆ ನುಡಿ ನಿಜವನೇ
ಸಂಗಮ ಸಂಭ್ರಮವಾಗಲಿ ಅನುರಾಗದಲಿ
ಒಲವಿನ ತೋಳಲಿ ಒಂದಾಗುವಾ
ನಲಿವಿನ ಸಂತಸವನ್ನೆಲ್ಲ ಸೂರೆಯಾಗುವಾ
ಬಯಸಿಬಂದಿರುವೆ ಸರಸಿಯೆ ಸಂಗಾತಿಯಾಗುವಾ.
ಉಸಿರ ಬಿಸಿಯಲಿ ಬೆರೆಯುತ ಸಂಗಮವಾಗುವಾ
ಮಿಲನದ ಈ ದಿನ ತರಲಿ ಹರುಷ
ವಿರಹದ ನೋವಿಗೆ ನಲಿವಿನ ಸರಸ
ಮಿಡಿದಹೃದಯಗಳು ಬೆರೆತ ರಸನಿಮಿಷ
ಸಾಂಗತ್ಯ ಸಂಭ್ರಮವಾಗಲಿ ಪ್ರತಿನಿಮಿಷ..
ನೀನಿರದೆ ನನಬಾಳು ಬೆಳಗಲ್ಲ
ನಿನ್ನ ಗೆಜ್ಜೆಯನಾದದಿ ಬೆಳಗಾಗುವದಲ್ಲ
ನೀನಿದ್ದ ತಾಣವೇ ಸಗ್ಗ ಧರೆಯಲ್ಲ
ಒಲಿದು ಒಂದಾದ ಸಂಭ್ರಮ ಶೃಂಗಾರವಲ್ಲ.
ಜಯಶ್ರೀ ಭ.ಭಂಡಾರಿ.
ಬಾದಾಮಿ.
9986837446