ಜೆಡಿಎಸ್ ನಲ್ಲಿ ಯುವ ದಳಪತಿಗಳ ದರ್ಬಾರ್
ಜೆಡಿಎಸ್ ನಲ್ಲಿ ಯುವ ದಳಪತಿಗಳ ದರ್ಬಾರ್
ಮುಂದಿನ ಚುನಾವಣೆ ನೇತೃತ್ವ ನಿಖಿಲ್ ಮತ್ತು ಪ್ರಜ್ವಲ್ – ಕುಮಾರಸ್ವಾಮಿ
ಬಿಡದಿಃ ಮುಂಬರುವ ಚುನಾವಣೆ ಯಲ್ಲಿ ಯುವಕರ ಶಕ್ತಿ ಅಗತ್ಯವಿದ್ದು, ಆ ಹಿನ್ನೆಲೆ ನಿಖಿಲ್ ಮತ್ತು ಪ್ರಜ್ವಲ್ ಮುಂಬರುವ ಸಾರ್ವತ್ರಿಕ ಚುನಾವಣೆ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಧ್ಯಕ್ಷ ಘೋಷಣೆ ಮಾಡಿದರು.
ನಗರದಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಯುವ ಶಕ್ತಿ ಇಬ್ಬರು ಯುವ ನಾಯಕತ್ವದಡಿ ಸಂಘಟನಾತ್ಮಕವಾಗಿ ಹೆಚ್ವಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು, ಬರುವ ಚುನಾವಣೆಯಲ್ಲಿ ಯುವಕರು ಮತ್ತು ಮಹಿಳೆಯರಿಗೆ ಹೆಚ್ವಿನ ಆದ್ಯತೆ ನೀಡಲಾಗುವದು.
ಆ ನಿಟ್ಟಿನಲ್ಲಿ ಟಿಕೆಟ್ ನೀಡುವ ಮುನ್ಸೂಚನೆ ನೀಡಿದರು. ಆದರೆ ಇದು ವಂಶಪರಂಪರೆಯ ರಾಜಕಾರಣಕ್ಕೆ ಒತ್ತು ನೀಡಿರುವದು ಎದ್ದು ಕಾಣುತ್ತಿದ್ದು, ಆ ಕುರಿತು ಎದುರು ಪಕ್ಷಗಳು ಯಾವುದೇ ಕಿಡಿ ಕಾರಿದರು, ಪ್ರತಿಕ್ರಿಯೆ ನೀಡದೆ, ಮಾಜಿ ಪ್ರಧಾನಿ ದೇವೆಗೌಡರು ಮತ್ತು ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಜನರಿಗೆ ಮನವರಿಕೆ ಮಾಡುವ ಕುರಿತು ಚುನಾವಣೆ ಎದುರಿಸಬೇಕೆಂದು ಚರ್ಚಿಸಲಾಗಿದೆ ಎಂಬ ಮಾಹಿತಿಯು ಇದೆ.