ಮಾಧ್ಯಮದವರ ಮೇಲೆ ಹಲ್ಲೆಃ ಆರೋಪಿಗಳ ಗಡಿಪಾರಿಗೆ ಆಗ್ರಹ
ಪತ್ರಕರ್ತರ ಮೇಲೆ ಹಲ್ಲೆಃ ಆರೋಪಿಗಳ ಬಂಧನಕ್ಕೆ ಆಗ್ರಹ

ಪತ್ರಕರ್ತರ ಮೇಲೆ ಹಲ್ಲೆಃ ಆರೋಪಿಗಳ ಬಂಧನಕ್ಕೆ ಆಗ್ರಹ
yadgiri, ಶಹಾಪುರಃ ಬಸವಕಲ್ಯಾಣದಲ್ಲಿ ಸುದ್ದಿಗಾಗಿ ತೆರಳಿದ್ದ ಖಾಸಗಿ ವಾಹಿನಿಯೊಂದರ ವರದಿಗಾರ ಹಾಗೂ ಕ್ಯಾಮೆರಾ ಮ್ಯಾನ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ಖಂಡನೀಯವಾಗಿದೆ. ಈ ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳುವ ಮೂಲಕ ಆ ದುಷ್ಟರನ್ನು ಗಡಿಪಾರು ಮಾಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾರಾಯಣಾಚಾರ್ಯ ಸಗರ ಆಗ್ರಹಿಸಿದರು.
ಬಸವ ಕಲ್ಯಾಣದಲ್ಲಿ ಮಾಧ್ಯಮದವರ ಮೇಲೆ ಆದ ಹಲ್ಲೆಯನ್ನು ಖಂಡಿಸಿ ನಗರದ ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗದ ಮೇಲೆ ಹಲವಾರು ರೀತಿಯ ದಬ್ಬಾಳಿಕೆ, ದೌರ್ಜನ್ಯ ಎಸಗುತ್ತಲೆ ಬರುತ್ತಿರುವದು ಶೋಚನಿಯವಾಗಿದೆ. ಪತ್ರಿಕಾರಂಗ ಶೋಷಿತರ ಪರ, ಅಸಹಾಯಕರ ಪರ, ಸಾರ್ವಜನಿಕ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತದೆ. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಪತ್ರಿಕಾರಂಗ ಸಾರ್ವಜನಿಕರಲ್ಲಿ ಸದಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಆ ಹಿನ್ನೆಲೆ ಮಾಧ್ಯಮದವರ ರಕ್ಷಣೆಗೆ ಸರ್ಕಾರ ನೂತನ ಕಾಯ್ದೆಯೊಂದು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಆಲೂರ ಮನವಿ ಪತ್ರ ಓದಿ ಗ್ರೇಡ್-2 ತಹಸೀಲ್ದಾರರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೌರವಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಹಿರಿಯ ಪತ್ರಕರ್ತರಾದ ಈರಣ್ಣ ಹಾದಿಮನಿ, ಟಿ.ನಾಗೇಂದ್ರ, ಮಲ್ಲಯ್ಯ ಪೋಲಂಪಲ್ಲಿ, ಚಂದ್ರು ಕಟ್ಟಿಮನಿ, ಭಾಗೇಶ ರಸ್ತಾಪುರ, ಬಸವರಾಜ ಕರೇಗಾರ, ಚನ್ನು ದೊಡ್ಮನಿ, ರಾಜೇಶ ಗುತ್ತೇದಾರ ಇತರರಿದ್ದರು.