ಪ್ರಮುಖ ಸುದ್ದಿ
ದೇವೇಗೌಡ ಇನ್ನೊಂದು ಜನ್ಮವೆತ್ತಿದರೂ ಸಿದ್ರಾಮಯ್ಯನ ಏನು ಮಾಡಲಾಗಲ್ಲ.!
ದೇವೆಗೌಡ ಏನೇ ಆರೋಪಿಸಿದರೂ ಸಿದ್ರಾಮಯ್ಯನ ಹೆಸರು ಹಾಳು ಮಾಡಲಾಗದು-ಕಾಗಿನೆಲೆ ಶ್ರೀ
ಬಾಗಲಕೋಟಃ ಸಿದ್ರಾಮಯ್ಯನವರ ಹೆಸರು ಹಾಳು ಮಾಡಬೇಕು ಅವರ ರಾಜಕೀಯ ಭವಿಷ್ಯ ಇಲ್ಲದಂತೆ ಬೆಳೆಯದಂತೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ದೇವೇಗೌಡರು ನಾನಾ ತಂತ್ರಗಾರಿಕೆಯನ್ನು ಉಪಯೋಗಿಸುತ್ತಿದ್ದು, ಅವರಿಂದ ಏನು ಮಾಡಲಾಗದು ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು.
ಜಿಲ್ಲೆಯ ಮುಧೋಳ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,
ಮಾಜಿ ಪ್ರಧಾನಿ ದೇವೇಗೌಡ ಮತ್ತೊಮ್ಮೆ ಜನ್ಮವೆತ್ತಿದರು ಸಿದ್ರಾಮಯ್ಯನವರ ಹೆಸರು ಹಾಳು ಮಾಡಲು ಆಗುವದಿಲ್ಲ.
ಸಿದ್ರಾಮಯ್ಯನಂತ ಜನ ನಾಯಕರಿಲ್ಲ.
ಇಂತಹ ಉತ್ತಮ್ಮ ನಾಯಕತ್ವ ಗುಣ ಹೊಂದಿದ ಸಿದ್ರಾಮಯ್ಯನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದರೇ ಜನರಿಗೇನು ಗೊತ್ತಾಗೋದಿಲ್ವಾ.? ಯಾರ್ ಏನೇ ಅಂದ್ರು ಸಿದ್ರಾಮಯ್ಯ ರಿಗೆ ಏನು ಮಾಡುವದು ಆಗಲ್ಲ ಎಂದು ವಿವರಿಸಿದರು.