ಶಹಾಪುರಃ ಮೂರು ಪ್ಯಾಟಿಯಲ್ಲಿ ಕಾರಹುಣ್ಣಿಮೆ ಕರಿ ಸಂಭ್ರಮ
ಸರ್ಕಾರಿ ಎತ್ತುಗಳ ಮೆರವಣಿಗೆ ಮೂರು ಅಗಸಿಯಲ್ಲಿ ಕರಿ ಸಂಭ್ರಮ

ಸರ್ಕಾರಿ ಎತ್ತುಗಳ ಮೆರವಣಿಗೆ ಮೂರು ಅಗಸಿಯಲ್ಲಿ ಕರಿ ಸಂಭ್ರಮ
ಬಿಳಿ ಎತ್ತುಗಳಿಂದ ಕರಿ ಮುಂಗಾರು ಉತ್ತಮ ಫಲ ನಿರೀಕ್ಷೆ
ಮಲ್ಲಿಕಾರ್ಜುನ ಮುದನೂರ
yadgiri, ಶಹಾಪುರಃ ನಗರದಲ್ಲಿ ಹಳೇಪೇಟೆ, ಗುತ್ತಿಪೇಟೆ ಮತ್ತು ಶಹಾಪುರ ಪೇಟೆ ಎಂದು ಮೂರು ಪ್ಯಾಟಿಗಳಿದ್ದು, ಪ್ಯಾಟಿಗೊಂದು ಅಗಸಿಗಳಿವೆ. ಪ್ರತಿ ಕಾರಹುಣ್ಣಿಮೆ ಕರಿ ಸಂಭ್ರಮ ನೋಡಲು ಇಲ್ಲಿ ಜನ ಸೇರುತ್ತದೆ. ನಗರದ ಆನೇಗುಂದಿ ಬಡಾವಣೆಯ ದಿ.ಸಿದ್ರಾಮಪ್ಪಗೌಡ ಶಿರವಾಳಕರ್ ಮನೆತನದ ಎತ್ತುಗಳು ಸಿಂಗಾರಗೊಳಿಸಿ ರೈತಾಪಿ ಜನರು ಅವುಗಳನ್ನು ವಾದ್ಯಗಳ ಸಮೇತ ಮೆರವಣಿಗೆ ಹೊರಟು ಮೊದಲಿಗೆ ನಗರದ ದಿಗ್ಗಿ ಬೇಸ್‍ಗೆ ಆಗಮಿಸಿ ಕರಿ ಎರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ದಿ.ಸಿದ್ರಾಮಪ್ಪಗೌಡ ಶಿರವಾಳಕರ್ ಮನೆತನಕ್ಕೆ ಇದು ಮೊದಲಿನಿಂದಲೂ ಸಾಂಪ್ರದಾಯಿಕ ನೇತೃತ್ವ ನೀಡಲಾಗಿದ್ದು, ಇವರ ಎತ್ತುಗಳನ್ನು ಸರ್ಕಾರಿ ಎತ್ತುಗಳೆಂದು ಕರೆಯುತ್ತಾರೆ.
ದಿಗ್ಗಿ ಅಗಸಿ ನಂತರ ಹೆಂಡಗೇರಿ ಅಗಸಿಗೆ ಇದೇ ಎತ್ತುಗಳ ಮಎರವಣಿಗೆ ಸಮೇತ ತೆರಳಿ ಅಲ್ಲಿಯೂ ಕರಿಯನ್ನು ಅರೆದು ತದನಂತರ ಕನ್ಯಾಕೋಳೂರ ಅಗಸಿಯಲ್ಲಿ ಕರಿ ಅರಿಯಲಾಗುತ್ತದೆ. ಬುಧವಾರ ಸಂಜೆ ಮೊದಲಿಗೆ ದಿಗಿ ಅಗಿಸಿಗೆ ಮೆರವಣಿಗೆಯೊಂದಿಗೆ ಆಗಮಿಸಿದ ಶಿರವಾಳಕರ್ ಮನೆತನದ ಎತ್ತುಗಳು ಸಂಜೆ 645 ಕ್ಕೆ ಚಾಲನೆ ನೀಡಲಾಯಿತು. ಬಿಳಿ ಎತ್ತುಗಳು ಕರಿ ಎರೆಯಲಾಗಿದ್ದು, ಮುಂಗಾರು ಉತ್ತಮವಾಗಿದೆ ಎಂದು ಸಂಭ್ರಮದಲ್ಲಿ ಭಾಗವಹಿಸಿದ್ದ ರೈತಾಪಿ ಜನರು ಖುಷಿ ಪಟ್ಟರು. ಜೋಳ, ಹತ್ತಿ ಬೆಳೆಗಳ ಫಲ ಚನ್ನಾಗಿ ಮೂಡಿ ಬರಲಿದೆ ಎಂಬುದನ್ನು ಭಾಗವಹಿಸಿದ್ದ ರೈತರು ಉವಾ ಜೊತೆ ಹಂಚಿಕೊಂಡರು.
ಕರಿ ಅರಿಯುವಿಕೆಃ ಕರಿ ಅರಿಯುವಿಕೆ ಅಂದರೆ, ಅಗಸಿ ದ್ವಾರ ಬಾಗಿಲಿಗೆ ಬೇವಿನ ಎಲೆಗಳಿಂದ ಸಿಂಗರಿಸಿ ಅಡ್ಡಲಾಗಿ ಹಗ್ಗವನ್ನು ಕಟ್ಟಿರಲಾಗುತ್ತದೆ, ಈ ಮೊದಲೇ ಸುಣ್ಣ ಬಣ್ಣದಿಂದ ಅಗಸಿ ಸ್ವಚ್ಛಗೊಳಿಸಿ ಸಿಂಗರಿಸಲಾಗಿರುತ್ತದೆ. ಕರಿ ಎರೆಯವುದು ಎಂದರೆ, ಕರಿ ಮತ್ತು ಕಂದು ಮತ್ತು ಬಿಳಿ ಬಣ್ಣ ಎತ್ತುಗಳನ್ನು ಸಿಂಗರಿಸಿ ಅವುಗಳ ಕೊರಳಿಗೆ ಕಟ್ಟಿದ ಹಗ್ಗವನ್ನು ಅಗಸಿ ಬಾಗಿಲಿಗೆ ಕಟ್ಟಿದ ಸುತುಳಿ (ಹಗ್ಗ) ಕ್ಕೆ ಎಸೆದು ಅದನ್ನು ಅರೆದು ಮುಂದಕ್ಕೆ ಹೋಗುವ ಎತ್ತಿನ ಬಣ್ಣದ ಮೇಲೆ ಮುಂಗಾರು ಬೆಳೆ ಕುರಿತು ರೈತರು ಅರ್ಥೈಸಿಕೊಳ್ಳುವದಕ್ಕೆ ಕರಿ ಎಳೆಯುವದು ಎನ್ನಲಾಗುತ್ತದೆ. ಇದು ರೈತಾಪಿ ಜನರ ಸಂಭ್ರಮವಾಗಿದೆ. ಹಲಿಗೆ, ಬಾಜಿ ಇತರೆ ವಾದ್ಯಗಳ ನಿನಾದ, ಎತ್ತುಗಳ ಸಿಂಗಾರ ಮೆರವಣಿಗೆ ಮನಮೋಹಕವಾಗಿತ್ತು.
ಈ ಬಾರಿ ಬಿಳಿ ಬಣ್ಣದ ಎತ್ತುಗಳು ಕರಿ ಎಳೆದಿದ್ದು, ಮುಂಗಾರು ಉತ್ತಮ ಫಲ ನೀಡಲಿದೆ ಎಂಬ ನಿರೀಕ್ಷೆಯನ್ನು ಪುಷ್ಟಿಗೊಳಿಸಿದೆ. ಕಳೆದ ಬಾರಿ ಕೊರೊನಾದಿಂದ ಕಾರುಣ್ಣಿಮೆ ಕರಿ ಸಂಭ್ರಮ ಮೊಟಕುಗೊಂಡಿತ್ತು. ಈ ಬಾರಿ ರೈತಾಪಿ ವರ್ಗ ಸಂಭ್ರಮದಿಂದಲೇ ಭಾಗವಹಿಸಿದ್ದು, ಮುಂಗಾರು ಉತ್ತಮವಾಗಿದೆ ಎಂಬ ಸಂದೇಶವನ್ನು ಈ ಕರಿ ಎಳೆಯುವ ಮೂಲಕ ಕಂಡು ಕೊಂಡಿದ್ದೇವೆ. ಶಹಾಪುರ ಪೂರು ಪ್ಯಾಟಿಯಲ್ಲಿ ಕರಿ ಅರಿಯಲಾಗುತ್ತದೆ.
-ತಿಪ್ಪಣ್ಣ ನಾಟೇಕಾರ. ಭಜನಾ ಪದ ಹಾಡುಗಾರ.