ಕಲಬುರ್ಗಿಃ ಸೆಲ್ಫಿ ವಿಡಿಯೋ ವಾಟ್ಸಪ್ ಮಾಡಿ ಆತ್ಮಹತ್ಯೆಗೆ ಶರಣು
ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಕಲಬುರ್ಗಿಃ ಆತ್ಮಹತ್ಯೆಗೂ ಮುನ್ನಾ ಸೆಲ್ಫಿ ವಿಡಿಯೋ ಮಾಡಿ ತನ್ನ ಸಾವಿಗೆ ಕಾರಣವಾದವರ ಹೆಸರುಗಳನ್ನು ಹೇಳಿ ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪಿಡಿಎ ಇಂಜಿನೀಯರಿಂಗ್ ಕಾಲೇಜು ಬಳಿ ರೈಲು ಹಳಿ ಮೇಲೆ ಗುರುವಾರ ತಡರಾತ್ರಿ ನಡೆದಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದ ನಿವಾಸಿ ಸುಧಾಕರ(26) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯವುಕನಾಗಿದ್ದಾನೆ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಶರಣಾದ ಸುಧಾಕರ ಅವರ ಪತ್ನಿ ರೇಖಾ ಕಳೆದ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು ಎನ್ನಲಾಗಿದೆ.
ಪತ್ನಿಯನ್ನು ಮಾತಾಡಿಸಿಕೊಂಡು ವಾಪಸ್ ಹಿಂದಿರುಗುವ ವೇಳೆ ಸುಧಾಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಆತ ಕೌಟುಂಬಿಕ ಕಿರಿಕಿರಿ ಮತ್ತು ತನ್ನ ಸಾವಿಗೆ ಕಾರಣರಾದವರ ಹೆಸರನ್ನು ವಿಡಿಯೋ ಮಾಡಿ ಅದರಲ್ಲಿ ಆರೋಪಿತರ ಹೆಸರನ್ನು ತಿಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೆಲ್ಫಿ ವಿಡಿಯೋದಲ್ಲಿ ಹೇಲಿರುವ ನಾಲ್ಕು ಆರೋಪಿತರ ಹೆಸರುಗಳು ಹೀಗಿವೆ. ಮಲ್ಲಪ್ಪ ಮುರಳಿ, ಬಾಗವ್ವ ಮುರುಳಿ, ಭೀಮಬಾಯಿ. ಮಾದೇವಿ ಇವರು ಹೆಂಡತಿ ಕಡೆಯಿಂದ ಸಂಬಂಧಿಕರೆಂದು ತಿಳಿಸಿದ್ದಾನೆ ಇವರೇ ನನ್ನ ಸಾವಿಗೆ ಕಾರಣವೆಂದು ಮತ್ತು ಜಯ ಕರ್ನಾಟಕ ಸಂಘಟನೆಯವರು ನನ್ನ ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬೇಡಿಕೊಂಡಿದ್ದಾನೆ. ಸೆಲ್ಫಿ ಮಾಡಿದ ವಿಡಿಯೋ ತುಣಕನ್ನು ಹಲವಡೆ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ ಎನ್ನಲಾಗಿದೆ.
ವಿಡಿಯೋ ಮಾಡಿದ ಮೊಬೈಲ್ ಸ್ಥಳದಲ್ಲಿಟ್ಟು ಆತ ರೈಲಿನ ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ವಾಡಿ ಪೊಲೀಸರು ಪರಿಶೀಳನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮಾಜದಲ್ಲಿ ನೈತಿಕ ಅದ:ಪತನದ ಸಂಕೇತವೆ ಈ ಆತ್ಮಹತ್ಯೆಯ ಪ್ರಕರಣಗಳು
S 100% sir