ಪ್ರಮುಖ ಸುದ್ದಿ
ಕಡೂರಃ ಆಸ್ತಿ ಖರೀದಿ ಮಾತುಕತೆ ವೇಳೆ ಫೈರಿಂಗ್ ಇಬ್ಬರಿಗೆ ಗಾಯ
ಚಿಕ್ಕಮಗಳೂರುಃ ಆಸ್ತಿ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆದ ಘಟನೆ ಜಿಲ್ಲೆಯ ಕಡೂರ ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಣೂರ ಗ್ರಾಮದಲ್ಲಿ ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಆಸ್ತಿ ಖರೀದಿಗಾಗಿ ಮಾತುಕತೆಗೆ ಆಗಮಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಖರೀದಿ ವಿಚಾರ ಸಂಬಂಧ ಗಲಾಟೆ ನಡೆದ ಪರಿಣಾಮ ಕಲ್ಯಾಣಕುಮಾರ್ ಮತ್ತು ಸುಮಂತ್ ಎಂಬುವರ ಮೇಲೆ ಎದುರಾಳಿಗಳಿಂದ ಫೈರಿಂಗ್ ನಡೆದಿದೆ.
ಗಾಯಗೊಂಡ ಈ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎನ್ನಲಾಗಿದೆ. ಬೆಂಗಳೂರಿನಿಂದಲೇ ಬಂದಿದ್ದ ಇನ್ನಿಬ್ಬರು ಇವರ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.