ಪ್ರಮುಖ ಸುದ್ದಿ
ಬಾಲಿವುಡ್ ನಟಿ ಕಾಜೋಲ್ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದೇಕೆ?
ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠಕ್ಕೆ ಬಾಲಿವುಡ್ ನಟಿ ಕಾಜೋಲ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಪುತ್ರ ಯೋಗಿ ಹಾಗೂ ಅಮ್ಮ ತನುಜ, ತಂಗಿ ತನಿಷಾ ಜೊತೆಗೆ ಕುಟುಂಬ ಸಮೇತರಾಗಿ ಆಗಮಿಸಿ ಸಿದ್ಧಾರೂಢ ಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ಧಾರೂಢರ ಗದ್ದುಗೆ ಬಳಿ ಕುಳಿತು ಕಾಜೋಲ್ ಕೆಲ ಹೊತ್ತು ಧ್ಯಾನ ಸಲ್ಲಿಸಿದ್ದಾರೆ.
ಸಿದ್ಧಾರೂಢ ಮಠದ ದರ್ಶನಕ್ಕೆಂದೇ ವಿಶೇಷ ವಿಮಾನದಲ್ಲಿ ಕಾಜೋಲ್ ಆಗಮಿಸಿದ್ದರು. ನಟಿ ಕಾಜೋಲ್ ಬಾಲ್ಯದಿಂದಲೂ ಸಿದ್ಧರೂಢ ಮಠದ ಭಕ್ತರಾಗಿದ್ದರೆಂದು ತಿಳಿದು ಬಂದಿದೆ.