ಪ್ರಮುಖ ಸುದ್ದಿ
ಕಲಬುರ್ಗಿಃ ಮೃತ ವೃದ್ಧನ ಸಂಬಂಧಿಕರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ದೃಢ
ಕಲಬುರ್ಗಿಃ ಈಚೆಗೆ ದುಬೈನಿಂದ ವಾಪಾಸ್ ಆಗಿದ್ದ 76 ವರ್ಷದ ವೃದ್ಧ ಮಹ್ಮದ್ ಹುಸೇನ್ ಸಿದ್ಧಿಕಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ.
ಮೃತ ವೃದ್ಧರ ಸಂಬಂಧಿಗಳನ್ನು ಪರೀಕ್ಷಿಸಲಾಗಿ ಮೂವರಿಗೆ ನೆಗೆಟಿವ್ ಬಂದಿದ್ದು ಇನ್ನೊಬ್ಬರಿಗೆ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಒಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.
ಮೃತ ವೃದ್ದರ ಸಂಬಂಧಿಕರ ಮೇಲೆ ತೀವ್ರ ನಿಗಾ ವಹಿಸಿದ್ದ ಆರೋಗ್ಯ ಇಲಾಖೆ, 4 ಜನರಲ್ಲಿ ಒಬ್ಬರಿಗೆ ಇದೀಗ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ತಿಳಿಸಿದೆ.