ಕಲಬುರ್ಗಿಃ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
ಕಲಬುರ್ಗಿ ಯಲ್ಲೂ ಕಾಮುಕನ ಅಟ್ಟಹಾಸ, 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ
ಕಲಬುರ್ಗಿಃ ಹೈದ್ರಾಬಾದ್ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಮಾಸದಿರುವ ಮುನ್ನವೇ ಅಂತಹದ್ದೆ ಘಟನೆ ರಾಜ್ಯದಲ್ಲೂ ಮುಂದುವರೆದಿವೆ.
ಕಾಮುಕನೊಬ್ಬ ಆಟವಾಡುತ್ತಿದ್ದ 9 ವರ್ಷದ ಬಾಲಕಿಯನ್ನು ಚಾಕಲೇಟ್ ಕೊಡಿಸುವ ನೆಪವೊಡ್ಡಿ ಫುಸಲಾಸಿಕೊಂಡು ಹೊರವಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಉಸಿರು ಗಟ್ಟಿಸಿ ಕೊಲೆಗೈದ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಪುರ ಗ್ರಾಮದಲ್ಲಿ ನಡೆದಿದೆ.
ಮದ್ಯಾಹ್ನ ಮನೆಮುಂದೆ ಆಟವಾಡುತ್ತಿದ್ದ ಬಾಲಕಿ ಕಾಣೆಯಾಗಿರುವದನ್ನು ಗಮನಿಸಿದ ಪಾಲಕರು ಹುಡುಕಾಟ ನಡೆಸಿದ್ದಾರೆ. ಸೋಮವಾರ ರಾತ್ರಿ ಗ್ರಾಮದ ಹೊರವಲಯದಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಬಾಲಕಿ ಆರೋಪಿ ಜತೆ ಮದ್ಯಾಹ್ನ ಹೊರಟಿರುವದನ್ನು ಸಾರ್ವಜನಿಕರು ನೀಡಿದ ಸುಳಿವಿನ ಮೇಲೆ ಪೊಲೀಸರು ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಸುಲೇಪೇಠ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್.ಪಿ. ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.