ಪ್ರಮುಖ ಸುದ್ದಿ

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಯೋಜನೆಗಳು ಪೂರಕ- ಡಾ.ರಾಗಪ್ರಿಯ

ಕರಕುಶಲ ವಸ್ತುಗಳ ತಯಾರಿಕೆಗೆ ಸರ್ಕಾರದಿಂದ ನೆರವು – ಡಿಸಿ ರಾಗಪ್ರಿಯ 

ಯಾದಗಿರಿಃ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳ ಲಾಭ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ಕರೆ ನೀಡಿದರು.

ಅವರು ಫೆ.5 ರ ಶುಕ್ರವಾರ ನಗರದ ಬಾಲಾಜಿ ಕಲ್ಯಾಣ ಮಂಟಪದ ಹತ್ತಿರವಿರುವ ಕಲಿಕಾ ಟ್ರಸ್ಟ್ ಗೆ ಭೇಟಿ ನೀಡಿ ಲಂಬಾಣಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುತ್ತಿರುವ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಮಾತನಾಡಿದರು.

ಮಹಿಳೆಯರ ಏಳಿಗೆಗೆ ಸರ್ಕಾರ ರೂಪಿಸಿರುವ ಯೋಜನೆಗಳು ಪೂರಕವಾಗಿವೆ, ವಿವಿಧ ಯೋಜನೆಗಳ ಕುರಿತು ತರಬೇತಿ ಪಡೆದು, ಆ ಮೂಲಕ ಆರ್ಥಿಕವಾಗಿ ಬಲಾಡ್ಯರಾಗಬೇಕು, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದರು. ಕರಕುಶಲ ವಸ್ತುಗಳಾದ ಲಂಬಾಣಿ ಉಡುಪು, ಮಾಸ್ಕ್, ಕೈಚೀಲ, ಕೈಯಿಂದ ತಯಾರಿಸಿದ ಸರಗಳು ಸೇರಿದಂತೆ ಇನ್ನೀತರೆ ವಸ್ತುಗಳನ್ನು ಅವರು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಮ್ಯಾಗೇರಿ, ಟಾಟಾ ಟ್ರಸ್ಟ್ ಕಲಿಕೆ ಸಂಸ್ಥೆಯ ನಿರ್ದೇಶಕ ಗಿರೀಶ, ಪ್ರಮಿಳ, ಸಾಯಿಬಾಬ, ಮಯೂರ ಪೂಜಾರಿ, ಜಿಲ್ಲಾ ಮಹತ್ವಾಕಾಂಕ್ಷೆ ಸಮಾಲೋಚಕರು ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button