ಪ್ರಮುಖ ಸುದ್ದಿ
ಕನಕನೆಡೆಗೆ ನಮ್ಮ ನಡೆ ಇರಲಿ- ಸಿದ್ರಾಮಯ್ಯ
ನಮಗೀಗ ಬೇಕಿದೆ ವರ್ಣ ಭೇದ ರಹಿತ ಹಿಂದೂ ಧರ್ಮ-ಸಿದ್ರಾಮಯ್ಯ
ಮೈಸೂರಃ ನಮಗಿಂದು ಬೇಕಾಗಿರುವದು ಕನಕದಾಸರು ಪ್ರತಿಪಾದಿಸಿದ ಜಾತಿ, ವರ್ಣ, ವರ್ಗ, ಲಿಂಗ ಭೇದ ಇಲ್ಲದ ಹಿಂದೂ ಧರ್ಮ. ವರ್ಣವ್ಯವಸ್ಥೆಯನ್ನು ಪ್ರತಿಪಾದಿಸುವ ಧರ್ಮ ಧರ್ಮವೆರ ಅಲ್ಲವೆಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ರಾಮಯ್ಯ ಟ್ವಿಟ್ ಮೂಲಕ ತಿಳಿಸಿದ್ದಾರೆ.
ನಗರದಲ್ಲಿ ಕನಕದಾಸ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನಕದಾಸರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.
ಟ್ವಿಟ್‍ನಲ್ಲೂ ಈ ವಿಷಯ ಪ್ರಸ್ತಾಪಿಸಿದ ಅವರು, ಐದುನೂರು ವರ್ಷಗಳ ಹಿಂದೆಯೇ ಕುಲ ಕುಲ ಎಂದು ಹೊಡೆದಾಡದಿರಿ ಎಂದು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿದರುವ ಜಾತಿ ವ್ಯವಸ್ಥೆ ಕುರಿತು ದಿಟ್ಟತನದಿಂದ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆ ಕಟ್ಟಿದ್ದ ಸಂತ ಕನಕದಾಸರನ್ನು ಸ್ಮರಣೆ ಇಂದು ಅಗತ್ಯವಿದೆ. ಅವರು ತೋರಿದ ದಾರಿಯಲ್ಲಿ ಸಾಗಬೇಕಿದೆ. ಕನಕನೆಡೆಗೆ ನಮ್ಮ ನಡೆ ಇರಲಿ ಎಂದು ಅವರು ತಿಳಿಸಿದ್ದಾರೆ.