ಕನ್ನಡ ಭಾಷೆ ಮಾತಾಡುವ ಪ್ರದೇಶಗಳು ಒಗ್ಗೂಡಿಸಿದ ದಿನ
ಕನ್ನಡ ಸೇನೆಯ ನಿಸ್ವಾರ್ಥ ಸೇವೆ ಸ್ಮರಣೀಯ – ಮುದ್ನೂರ
yadgiri, ಶಹಾಪುರಃ ಈಗಿನ ಕರ್ನಾಟಕ ಮೊದಲು ಮೈಸೂರ ರಾಜ್ಯವಾಗಿತ್ತು. 1956 ನವೆಂಬರ್ ಒಂದರಂದು ಕರ್ನಾಟಕವಾಗಿ ಹೆಸರು ಬದಲಾಗಿ ನಿರ್ಮಿತಗೊಂಡಿತ್ತು. ಆಗ ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತಾಡುವ ಪ್ರದೇಶಗಳನ್ನು ಒಂದಡೆ ಸೇರಿಸುವ ಮೂಲಕ (ಮೈಸೂರ ರಾಜ್ಯ) ಕರ್ನಾಟಕ ರಾಜ್ಯವಾಗಿ ಉದಯವಾಯಿತು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ತಿಳಿಸಿದರು.
ಸಮೀಪದ ಭೀಮರಾಯನ ಗುಡಿಯ ಸೆಕೆಂಡ್ ಸ್ಟಾಪ್ (ಬಸ್ ನಿಲ್ದಾಣ) ಪ್ರದೇಶದಲ್ಲಿ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಕನ್ನಡ ಸೇನೆ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಮೈಸೂರ ಸಂಸ್ಥಾನ, ಹೈದ್ರಾಬಾದ್ ಕರ್ನಾಟಕ, ಮುಂಬಯಿ ಕರ್ನಾಟಕ ಮತ್ತು ಮದ್ರಾಸ್ ಕರ್ನಾಟಕ ನಾಲ್ಕು ಭಾಗಗಳಾಗಿದ್ದ ಕನ್ನಡ ಪ್ರದೇಶಗಳನ್ನು ಒಂದಾಗಿಸುವ ಮೂಲಕÉೂಂದು ರಾಜ್ಯವಾಗಿ ಘೋಷಣೆ ಮಾಡಲಾಯಿತು. ಇದುವೇ ಕರ್ನಾಟಕವಾಗಿ ಹೊರಹೊಮ್ಮಿತ್ತು.
ಕರ್ನಾಟಕದ ಏಕೀಕರಣಕ್ಕೆ ಕಾರಣರಾದ ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ, ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ ಅವರೆಲ್ಲರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ.
ಪ್ರಸ್ತುತ ಕಾಲದಲ್ಲಿ ಕನ್ನಡ ಅಂದರೆ ಕನ್ನಡಿಗರೇ ಮೂಗು ಮುರಿಯುತ್ತಿದ್ದಾರೆ. ಇದು ಸರಿಯಲ್ಲ ನಮ್ಮ ತಾಯಿ ಭಾಷೆಯಾದ ಕನ್ನಡವನ್ನು ನಾವೆಲ್ಲ ಗೌರವಿಸಬೇಕು. ಕನ್ನಡದ ಉಳಿವಿಗಾಗಿ ಕನ್ನಡ ಸೇನೆ ಸಾಕಷ್ಟು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಹಲವಾರು ಕನ್ನಡಪರ ಸಂಘಟನೆಗಳು ತಲೆ ಎತ್ತಿವೆ. ಆದರೆ ಕನ್ನಡ ಸೇನೆ ವಿಭಿನ್ನವಾಗಿದೆ ಕನ್ನಡಾಂಬೆಗಾಗಿ ಪ್ರಾಮಾಣಿಕ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ ಎಂದರು.
ಕನ್ನಡಾಂಬೆ ಭಾವಚಿತ್ರಕ್ಕೆ ವಿಶ್ವನಾಥರಡ್ಡಿ ಹಳಿಸಗರ ಪೂಜೆ ಸಲ್ಲಿಸಿದರು. ಕೆಬಿಜೆಎನ್‍ಎಲ್ ಅಧಿಕಾರಿ ಅಮೀತ್ ಕ್ಯಾತನವರ್, ಪ್ರಮೋದ ಪಾಟೀಲ್, ಜೆಸ್ಕಾಂ ಶಾಖಾ ಅಧಿಕಾರಿ ಎಕ್ಬಾಲ್ ಲೋಹಾರಿ, ನಗರಸಭೆಯ ಸುರೇಂದ್ರ, ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ, ಮಂಜು, ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಗನೂರ, ಅಂಬ್ರೇಶಗೌಡ ಗುತ್ತೇದಾರ, ವೀರೇಶ ಅಂಗಡಿ, ರಾಯಣ್ಣ ಯುವ ಪಡೆ ಅಧ್ಯಕ್ಷ ರಾಯಪ್ಪ ಚಲುವಾದಿ, ನಿಂಗಯ್ಯ ರಸ್ತಾಪುರ, ಲೋಕನಾಥ, ಮಲ್ಲರಾವ್, ಬಸ್ಸು ಪಾಟೀಲ್, ರುದ್ರಗೌಡ, ಚಂದಪ್ಪ, ಮಹಾದೇಶ, ಮರಿಲಿಂಗ, ಸಾಬರಡ್ಡಿ, ಸಿದ್ದು ಭೀ.ಗುಡಿ, ಸಾಬು, ಸಂದೀಪ, ಗುರುಟೇಲರ್, ಯಲ್ಲಪ್ಪ ಚಲುವಾದಿ, ಪರಶು ಭೀ.ಗುಡಿ, ರಾಘು ಟೇಲರ್, ರಂಗನಾಥ, ಶರಣು ಮದ್ರಿಕಿ, ಮಹಿಬೂಬಸಾಬ, ಅರುಣ ನಾಯಕ ಇತರರಿದ್ದರು.