ಪ್ರಮುಖ ಸುದ್ದಿ
ಕನ್ನಡ ಸೇನೆ ಜಿಲ್ಲಾಧ್ಯಕ್ಷರಾಗಿ ನಗನೂರ ನೇಮಕ

ಕನ್ನಡ ಸೇನೆ ಜಿಲ್ಲಾಧ್ಯಕ್ಷರಾಗಿ ನಗನೂರ ನೇಮಕ
yadgiri, ಶಹಾಪುರಃ ಕನ್ನಡ ಸೇನೆ ಕರ್ನಾಟಕ ಸಂಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಕನ್ನಡದ ಕಟ್ಟಾಳು ಮಲ್ಲಿಕಾರ್ಜುನ ನಗನೂರ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ಲೋಕನಾಥ ದೋರನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ ಅರಸು ಅವರನ್ನು ರಾಜ್ಯ ಅಧ್ಯಕ್ಷ ಕೆ.ಆರ್.ಕುಮಾರ ಅವರ ಆದೇಶದ ಮೇರೆಗೆ ಈಶಾನ್ಯ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ದೇವು ಭೀ.ಗುಡಿ ನೇಮಿಸಿ ಆದೇಶಿಸಿದ್ದಾರೆ.
ನಗರದ ಸಿಬಿ ಕಮಾನ ಹತ್ತಿರ ಕನ್ನಡ ಸೇನೆ ಕಚೇರಿಯಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಸಂಸ್ಕøತಿ ಸೇವೆಗಾಗಿ ಸದಾ ಸಿದ್ಧರಿರಬೇಕು. ಅಲ್ಲದೆ ಮುಖ್ಯವಾಗಿ ಕನ್ನಡ ಸೇನೆಯ ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಜ್ಯಧ್ಯಕ್ಷ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸೇನೆ ತಾಲೂಕು ಅಧ್ಯಕ್ಷ ಅಂಬರೀಶಗೌಡ ಸಗರ, ಲಿಂಗರಾಜ, ಮಹಾದೇವ ಮದ್ರಿಕಿ, ಮಲ್ಲರಾವ ಕುಲಕರ್ಣಿ, ಮರಿಲಿಂಗ ಕೆ.ದೊಡ್ಡಿ ಇತರರಿದ್ದರು.