
ಕಟೀಲು ಯೂಟರ್ನ್ಃ ರಾಜೀನಾಮೆ ಕೊಟ್ಟಿಲ್ಲ
ಸತ್ಯಕ್ಕೆ ದೂರವಾದದು ಎಂದ ಕಟೀಲು
ವಿವಿ ಡೆಸ್ಕ್ಃ ಬಳ್ಳಾರಿಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದ ನಳೀನ್‌ಕುಮಾರ ಕಟೀಲು ಇದೀಗ ಯೂಟರ್ನ್ ಹೊಡೆದಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿದ್ದ ಕಟೀಲು ಅವರು, ಇದೀಗ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ರಾಜೀನಾಮೆ ಕೊಟ್ಟಿಲ್ಲ. ಪ್ರಸ್ತುತ ಪಕ್ಷದ ಸಂಘಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಹೈಕಮಾಂಡ್ ಗೆ ರಾಜೀನಾಮೆ ಸಲ್ಲಿಸಿರುವದಿಲ್ಲ ರಾಜೀನಾಮೆ ಕೊಟ್ಟಿದ್ದಾರೆಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಪಕ್ಷದ ರಾಜ್ಯ ಅಧ್ಯಕ್ಷಹುದ್ದೆಗೆ ಪೈಪೋಟಿ ಇರುವ ಕಾರಣ, ಹೈಕಮಾಂಡನಿಂದ ಸಂದೇವೇನಾದರೂ ಬಂದ ಹಿನ್ನೆಲೆ ಕಟೀಲು ಯುಟರ್ನ್ ಹೊಡೆದಿರುಬಹುದು ಎನ್ನಲಾಗಿದೆ.
ನೂತನ ಸಾರಥ್ಯಕ್ಕೆ ವಿ.ಸೋಮಣ್ಣ ಸೇರಿದಂತೆ ಇತರರು ಹೆಸರು ತೇಲಿ ಬಂದಿರುವ ಕಾರಣ ಹೈಕಮಾಂಡ್ ದಿಡೀರನೆ ಕಟೀಲುಗೆ ರಾಜೀನಾಮೆ ನೀಡಿರುವ ಕುರಿತು ಸದ್ಯಕ್ಕೆ ಪ್ರಕಟಣೆ ಹೊರಡಿಸದಿರಲು ಸೂಚನೆ ಬಂದಿರಬಹುದು ಎಂಬುದು ಚರ್ಚೆ ನಡೆದಿದೆ ಎನ್ನಲಾಗಿದೆ.